ನೋವನ್ನೆಲ್ಲ ಮರೆಸಿದವ ನೀ..
ನನಗೆ ಬದುಕಲು ಕಲಿಸಿದವ ನೀ..
ನನ್ನ ಬದುಕಿಗಾಗಿ ಮಿಡಿದವ ನೀ..
ನನ್ನ ಅಂತರಾಳ ನೀ..
ನನ್ನ ಅಂತರಾತ್ಮ ನೀ..
ನನ್ನ ಕಣ್ಣಿರೋರಿಸಿದವ ನೀ..
ನನಗೆ ಕಣ್ಣೀರಾಕಿಸಿದವರ ಕಣ್ಣಲ್ಲಿ
ರಕ್ತ ತರಿಸಿದವ ನೀ..
ನನಗಾಗಿ ಲೋಕವನೇ ಎದುರಾಕಿಕೊಂಡವ ನೀ..
ನನಗಾಗಿ ಬದುಕನೇ ಮುಡಿಪಿಟ್ಟವ ನೀ..
ನನ್ನ ಹೆಜ್ಜೆಗೆ ನೆರಳಾದವ ನೀ..
ನನ್ನ ನೆರಳಿಗೆ ಕಾವಲಾದವ ನೀ..
ನನ್ನ ಒಳ್ಳೆ ಸ್ನೇಹಿತ ನೀ..
ನನ್ನ ಬದುಕಿನ ರಕ್ಷಕನು ನೀ..
ಯಾರಂತೆಯೂ ಅಲ್ಲ ನೀ..
ಯಾರಂತೆಯೂ ಆಗಲ್ಲ ನೀ..
ಅದ್ಭುತ ನೀ.. ನನ್ನಪ್ಪ ನೀ..
ಅಪ್ಪ ನನ್ನ ಜೀವ ನೀ 💗🫶🏻🌍
0 Comments