ನಿಷ್ಠಾವಂತ ಸಂಗಾತಿಯ ಲಕ್ಷಣಗಳು || signs of loyal soulmate

ಪ್ರೀತಿ, ಮದುವೆ ಎಂಬ ಬಂಧದಲ್ಲಿ ಹೆಣ್ಣು ತನ್ನ ಸಂಗಾತಿಯಲ್ಲಿ ತುಂಬಾನೇ ನಿರೀಕ್ಷಿಸುತ್ತಾಳೆ. ಸಂಗಾತಿಯ ಬದ್ಧತೆ, ಕಷ್ಟ-ಸುಖದಲ್ಲಿ ಜೊತೆಗಿರುವ ನಿಷ್ಠಾವಂತ ಗುಣವನ್ನು ಅವಳು ನಿರೀಕ್ಷಿಸುತ್ತಾಳೆ. ಅಂತಹ ನಿಷ್ಠಾವಂತ ಸಂಗಾತಿಯನ್ನು ಗುರುತಿಸುವುದು ಹೇಗೆ.!? ನಿಷ್ಠಾವಂತ ಸಂಗಾತಿಯ ಕೆಲವು ಗುಣಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ನೋಡೋಣ.


1)ಪ್ರಾಮಾಣಿಕ ಮತ್ತು ನೇರ ಮಾತುಗಾರ 
ನಿಷ್ಠಾವಂತ ಸಂಗಾತಿ ತುಂಬಾ ಪ್ರಾಮಾಣಿಕನಾಗಿರುತ್ತಾನೆ ಮತ್ತು ಯಾವ ವಿಷಯಗಳನ್ನು ರಹಸ್ಯವಾಗಿ ಮುಚ್ಚಿಡುವುದಿಲ್ಲ. ನಿಷ್ಠಾವಂತ ವ್ಯಕ್ತಿ ತಪ್ಪೇ ಮಾಡಲ್ಲವೆಂದಲ್ಲ. ಆ ತಪ್ಪನ್ನು ತನ್ನ ಸಂಗಾತಿಯಿಂದ ಎಂದಿಗೂ ಮುಚ್ಚಿಡುವುದಿಲ್ಲ. ತಪ್ಪಾಗಿದ್ದಾಗಲೇ ಹೇಳಿ, ಆಗಲೇ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ, ಅದನ್ನು ಮುಚ್ಚಿಟ್ಟು ಗೊಂದಲಕ್ಕೀಡಾಗದಂತೆ ಇರುತ್ತಾನೆ.


2)ಬೆಂಬಲ 
ನಿಷ್ಠಾವಂತ ವ್ಯಕ್ತಿ ಯಾವಾಗಲೂ ನಿಮ್ಮ ನಿರ್ಧಾರಗಳಿಗೆ ಬೆಂಬಲ ನೀಡುತ್ತಾನೆ. ನೀವು ಕೈಲಾಗವರು ಎಂಬ ಭಾವನೆ ಕಾಡಲು ಆತ ಎಂದಿಗೂ ಬಿಡುವುದಿಲ್ಲ. ನಿಮ್ಮ ಪ್ರತಿ ಕನಸುಗಳಿಗ್ಯ್ ಸ್ಪಂದಿಸಿ ನಿಮ್ಮ ಪ್ರತಿ ಆಸೆಗಳನ್ನು ಈಡೇರಿಸುತ್ತಾನೆ.

3)ಸಹಾಯ 
ನಿಮ್ಮ ಕಷ್ಟದ ಸಮಯದಲ್ಲಿ ಯಾವಾಗಲೂ ನಿಮ್ಮ ಬೆನ್ನ ಹಿಂದೆ ನಿಂತಿರುತ್ತಾರೆ. ನಿಮ್ಮ ಪ್ರತಿ ಸಮಸ್ಯೆಗೂ ಪರಿಹಾರ ಕೊಟ್ಟು ಧೈರ್ಯ ಕೊಟ್ಟು ನಿಮ್ಮೊಟ್ಟಿಗೆ ನಿಲ್ಲುತ್ತಾರೆ.

4)ಜವಾಬ್ದಾರಿ 
ನಿಷ್ಠಾವಂತ ವ್ಯಕ್ತಿಯು ಎಂದಿಗೂ  ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳುವುದಿಲ್ಲ. ಕುಟುಂಬದ ಜವಾಬ್ದಾರಿಯ ಹೊತ್ತು ಸಂಗಾತಿಗೆ ನೆರವಾಗುತ್ತಾರೆ.

5)ಸಮಯ ಕೊಡುತ್ತಾರೆ 
ನಿಷ್ಠಾವಂತ ವ್ಯಕ್ತಿ ತನ್ನ ಸಂಗಾತಿಗೆ ಸಮಯವನ್ನು ಮೀಸಲಿಡುತ್ತಾರೆ. ತಾನು ಎಷ್ಟೇ ಒತ್ತಡದಲ್ಲಿದ್ದರೂ ಸಹ ತನ್ನಾಕೆಗೆ ಸಮಯ ನೀಡಿ ಪ್ರೀತಿ ತೋರಿಸುತ್ತಾನೆ.

6)ಸ್ನೇಹಿತರು ಮತ್ತು ಕುಟುಂಬ 
ನಿಷ್ಠಾವಂತ ವ್ಯಕ್ತಿ ತನ್ನ ಸಂಗಾತಿಯನ್ನು ತನ್ನ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಪರಿಚಯಿಸುತ್ತಾನೆ. ತನ್ನ ಸಂಗಾತಿಗೆ ಗೊಂದಲವುಂಟು ಮಾಡುವಂತಹ ಯಾವುದೇ ಮುಚ್ಚುಮರೆಯ ಸ್ನೇಹಿತರು ಹಾಗೂ ಕುಟುಂಬಸ್ಥರು ಆತನಿಗಿರುವುದಿಲ್ಲ.

7)ವಿಶ್ವಾಸ ಮತ್ತು ಭರವಸೆ 
ನಿಷ್ಠಾವಂತ ವ್ಯಕ್ತಿಯು ನಿಮ್ಮನ್ನು ಎಂದಿಗೂ ಅನುಮಾನಿಸುವುದಿಲ್ಲ. ನಿಮ್ಮ ಮೇಲೆ ವಿಶ್ವಾಸವಿಡುತ್ತಾರೆ. ಅನುಮಾನಾಸ್ಪದವಾಗಿ ಏನೇ ಕಂಡರೂ ಸಹ ನಿಮ್ಮೊಟ್ಟಿಗೆ ಪರಿಹರಿಸಿಕೊಳ್ಳುತ್ತಾರೆ.
ಯಾವತ್ತಿಗೂ ನಿಮಗೆ ಕೊಟ್ಟ ಭರವಸೆಗಳಿಗೆ ಧಕ್ಕೆ ಮಾಡುವುದಿಲ್ಲ. ವಿಶ್ವಾಸವಿಟ್ಟು ಬದುಕುವಂತಹ ಬದುಕನ್ನು ಕೊಡುತ್ತಾರೆ.

--ಹೆಣ್ಣು ಗಂಡು ಇಬ್ಬರಲ್ಲಿಯೂ ಸಹ ಹೊಂದಾಣಿಕೆ ಇದ್ದಾಗ ಮಾತ್ರ ಒಂದು ಸಂಸಾರ ಸುಖಮಯ ಆಗಲು ಸಾಧ್ಯ. ❤️

Post a Comment

0 Comments