ಸೋನು ನಿಗಮ್ ಅವರು ಭಾನುವಾರದ ಲೈವ್ ಪ್ರದರ್ಶನ ನೀಡುವ ಸಮಯದಲ್ಲಿ ತೀವ್ರ ಬೆನ್ನು ನೋವಿನಿಂದ ಬಳಳುತ್ತಿದ್ದರು. ಅಷ್ಟು ನೋವಿದ್ದರೂ ಕೂಡ ತಮ್ಮ ಪ್ರದರ್ಶನವನ್ನು ಮುಂದುವರೆಸಿದ್ದರು.
ಆದರೆ, ನೋವು ಹೆಚ್ಚಾಗುತ್ತಾ ಹೋದಂತಾದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಧರ್ಭದಲ್ಲಿ, ಅವರು ತಮ್ಮ ಆರೋಗ್ಯದ ಬಗ್ಗೆ ಹೇಳಿಕೊಂಡಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಸೋನು ನಿಗಮ್ ಅವರು ಹಂಚಿಕೊಂಡ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ -- "ಇದು ನನ್ನ ಜೀವನದ ಕಠಿಣ ದಿನ. ಇಂದು ನಾನು ಹಾಡುಗಳನ್ನು ಹಾಡಿ ಪ್ರದರ್ಶಿಸುವಾಗ ಬೆನ್ನು ನೋವು ಇತ್ತು. ಹಾಗೇ ವೇದಿಕೆಯ ಸುತ್ತಾ ತಿರುಗಾಡುತ್ತಾ ಹೇಗೋ ಆ ನೋವನ್ನು ನಿರ್ವಹಿಸುತ್ತಿದ್ದೆ. ಬೆನ್ನಲ್ಲಿ ತುಂಬಾ ನೋವಿತ್ತು. ಯಾರೋ ನನ್ನ ಬೆನ್ನಿಗೆ ಸೂಜಿಯಿಂದ ಚುಚ್ಚಿದಂತೆ ಭಾಸವಾಗುತ್ತಿತ್ತು". ಎಂದು ಹೇಳಿದ್ದಾರೆ.
ಈ ನೋವಿನಿಂದ ಗುಣಮುಖರಾಗಿ ಶೀಘ್ರದಲ್ಲಿ ಸೋನು ನಿಗಮ್ ಹೊಸ ಚೈತನ್ಯದೊಂದಿಗೆ ಬರಲಿ ಎಂದು ಎಲ್ಲಾ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
GET WELL SOON SONU SIR💗
0 Comments