ಕನಸಲ್ಲಾದರೂ ಬಾ ಒಮ್ಮೆ ತುಂಬಾ ಹೇಳೋದಿದೆ || Quote

ಕನಸಲ್ಲಾದರೂ ನೆನಪವಾಗಿ ಬಾ ಒಮ್ಮೆ...
ತುಂಬಾ ಹೇಳೋದಿದೆ..!
ತುಂಬಾ ಕೇಳೋದಿದೆ..!

ನಗುವೇ ಕಳೆದೋಗಿದೆ..
ನೆನಪೆ ಬದುಕಾಗಿದೆ..

ಕನಸಲ್ಲಾದರೂ ನೆಪವಾಗಿ ಬಾ ಒಮ್ಮೆ..!

ಎಲ್ಲವೂ ಕಳೆದಂತಾಗಿದೆ..
ಎಲ್ಲವೂ ಕಾಳದಂತಾಗಿದೆ..

ಈ ನೋವು ಅರಿಯದಾಗಿದೆ..
ಈ ಸಾವು ತೀರದಾಗಿದೆ..

ಕನಸೆಲ್ಲಾದರೂ ನೆಪವಾಗಿ ಬಾ ಒಮ್ಮೆ..!

ನೀನೆಲ್ಲಿ ತಿಳಿಯದಾಗಿದೆ..
ನೀನಿಲ್ಲಿ ಅಚ್ಚಂತಾಗಿದೆ..

ನೆಪದಲ್ಲೇ ಅತ್ತಂತಾಗಿದೆ..
ನೆನಪಲ್ಲೇ ಸತ್ತಂತಾಗಿದೆ..

ಕನಸಲ್ಲಾದರೂ ನೆಪವಾಗಿ ಬಾ ಒಮ್ಮೆ 
ತುಂಬಾ ಹೇಳೋದಿದೆ..!
ತುಂಬಾ ಕೇಳೋದಿದೆ..!

Post a Comment

0 Comments