ಪ್ರೀತಿಯ ಲೆಕ್ಕ ಸಿಗದೇ ಹೋಯಿತಾ..!?

ಲೆಕ್ಕ ಸಿಕ್ಕಿತಾ.!? ಇಲ್ಲ ಮನ್ನವಾಯಿತಾ..!?

PC : grok app

ಕೋಪವನೇ ಲೆಕ್ಕ ಹಾಕುತ್ತ ಕುಳಿತ ನಿನಗೆ,
ಪ್ರೀತಿಯ ಲೆಕ್ಕ ಸಿಗದೆ ಹೋಯಿತು,....

ಬಯಕೆಗಳೇ ಲೆಕ್ಕ ಹಾಕುತ್ತಾ ಕುಳಿತ ನಿನಗೆ, ಬದುಕಿನ ಲೆಕ್ಕ ಸಿಗದೇ ಹೋಯಿತು.....

ಕಳೆದು ಹೋದ ಕಷ್ಟಗಳ ಲೆಕ್ಕ ಹಾಕುತ್ತಾ ಕುಳಿತ ನಿನಗೆ, 
ಇಂದಿನ ಕಷ್ಟಗಳ ಲೆಕ್ಕ ಸಿಗದೇ ಹೋಯಿತು,....

ಇಂದಿನ ಆಸೆಗಳ ಲೆಕ್ಕ ಹಾಕುತ್ತ ಕುಳಿತ ನಿನಗೆ,
ಮುಂದಿನ ಕನಸುಗಳ ಲೆಕ್ಕ ಸಿಗದೇ ಹೋಯಿತು,...

ಬರೀ ಲೆಕ್ಕಗಳ ನಡುವೆ ಸಿಕ್ಕಿ ಬಿದ್ದ ನಿನಗೆ,
ನನ್ನ ಭಾವನೆಗಳ ಲೆಕ್ಕ ತಪ್ಪಿ ಹೋಯಿತು....

ಭಾವನೆಗಳ ಲೆಕ್ಕ ತಪ್ಪಿದ ನಿನಗೆ, 
ನನ್ನನ್ನ ಮರೆಯೋ ಲೆಕ್ಕ ಶುರುವಾಯಿತು.....

ಇನ್ನೇನು ಲೆಕ್ಕಗಳಲ್ಲೇ ಮನ್ನವಾಯಿತು..!
ನನ್ನ ಮರೆತು ನೀ ಖುಷಿಯಿಂದ ಇದ್ದಾಯಿತು...

ಲೆಕ್ಕ ಮನ್ನವಾಯಿತು.. ಪ್ರೀತಿ ಮಣ್ಣಾಯಿತು 💔

Post a Comment

0 Comments