ನೀನೆಂದರೆ ಇಷ್ಟವೂ ಇದೆ.. ಹೇಳಲು ಸ್ವಲ್ಪ ಕಷ್ಟವೂ ಇದೆ..!! ಹೇಳಿದರೆ ಇಷ್ಟ ಪಡುವೆಯಾ.. ಇಷ್ಟವಿಲ್ಲವೆಂದು ಹೇಳಿ ಕಷ್ಟ ಕೊಡುವೆಯಾ..!?
ನಿನ್ನ ಆ ಮಗುವಿನಂತ ಮುಗ್ಧತೆ, ನಿನ್ನ ಮೌನದಲ್ಲೇ ಮಾತು ತಿಳಿಸೋ ಆ ನಿನ್ನ ಸಭ್ಯತೆ ನನಗಿಷ್ಟ.. ನನಗಿಷ್ಟ..!
ನಿನ್ನ ಕೈಹಿಡಿಯಬೇಕೆಂಬ ಆಸೆ.. ಈ ಆಸೆ ಬರೀ ಮೂರು ದಿನಕ್ಕಲ್ಲ.. ನೂರಾರು ಜನುಮದುದ್ದಕ್ಕೂ..! ಅಂದು ನೀ ನನ್ನ ತಿರುಗಿ ನೋಡಿದ ಘಳಿಗೆ.. ತಿರುಗುವ ಭೂಮಿಯೇ ಬಿದ್ದಂತಾಯಿತು ನನ್ನ ಮನಸಿಗೆ.. ನಿನ್ನ ಹಿಂದೆ ಸುತ್ತುವ ಈ ನನ್ನ ಪ್ರತಿದಿನದ ಕೆಲಸಕ್ಕೆ ರಾಜೀನಾಮೆ ಕೊಡಿಸಿಬಿಡು ನೀನೇ,. ಹಾಗೆಯೇ ಕೊನೆಯವರೆಗೂ ನಿನ್ನ ಜೊತೆಗಿರುವಂತೆ ಪ್ರೀತಿಯ ಹೊಸ ಕೆಲಸ ಕೊಡಿಸಿಬಿಡು ನೀನೇ,..!!
ನನ್ನ ಹೆತ್ತ ತಾಯಿಯ ಸ್ಥಾನ ತುಂಬು ನೀನು.. ನಿನ್ನ ಪ್ರೀತಿಗೆ ಚಿರಋಣಿಯಾಗಿ ಪ್ರೀತಿಸುವೆ ನಾನು..! ನಿನ್ನ ಮಡಿಲಲ್ಲಿ ಮಗುವಗಿಸಿಬಿಡು ನನ್ನ ನೀನು,.. ನಿನ್ನ ಮುಡಿಯಲ್ಲಿ ದಿನವೂ ಬಾಡದಂತೆ ಮುಡಿಸುವೆ ಹೂವು ನಾನು..!!
ಕಣ್ಣೀರೇ ಬಾರದಂತೆ ನೋಡಿಕೊಳ್ಳುವೆ ನಾನು, ಕಣ್ಣೀರು ಬಂದ ಪರಿಸ್ಥಿತಿಯಲ್ಲಿ ಆ ಕಣ್ಣೀರ ಒರೆಸಿ ನಿನಗೆ ಹೆಗಲಾಗುವೆ ನಾನು.. 🥺
ನಿನ್ನ ಕನಸುಗಳಿಗೆಲ್ಲ ನಾ ಬೆನ್ನೆಲುಬಾಗುವೆ.. ನಾ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಳ್ಳುವೆ.. ನಿನ್ನೆದುರು ಬಂದು ಪ್ರೀತಿಯ ಹೇಳುವಷ್ಟು ಸಾಹಸವೂ ನಾ ಮಾಡೋದಿಲ್ಲ..!! ಆದರೂ ಸ್ವಲ್ಪ ಧೈರ್ಯ ಮಾಡುವೆ 🥰
ನೀನೊಮ್ಮೆ ನನ್ನ ಪ್ರೀತಿಯ ಒಪ್ಪಿದರೆ ಜೀವನವೇ ನಿನ್ನೊಟ್ಟಿಗೆ ಪ್ರೀತಿಯಿಂದ ಕಳೆದುಬಿಡುವೆ.. ಅದೇ ನೀನು ನನ್ನ ಪ್ರೀತಿಯ ತಿರಸ್ಕರಿಸಿದರೆ ದೂರದಿಂದಲೇ ನಿನ್ನ ನೋಡುತ್ತಾ ಜೀವನಪೂರ್ತಿ ಒಂಟಿಯಾಗಿ ಬಾಳುವೆ.. ನನ್ನ ಬದುಕಲ್ಲಿ ಪ್ರೀತಿ ಎಂದು ಬಂದರೆ ಅದು ನೀನೊಬ್ಬಳೇ.. ಬರದಿದ್ದರೂ ಸಹ ನೀನೊಬ್ಬಳೇ..!! ನೀ ಬಂದರೆ ನನ್ನ ಜೀವನದಲ್ಲಿರುವೆ.. ಬರದಿದ್ದರೆ ನನ್ನ ನೆನಪುಗಳಲ್ಲಿ ಇರುವೆ..!
ನಿನಗಾಗಿ ಮಿಡಿಯುತ್ತಿರುವ ಈ ಬಡಹೃದಯದ ನೋವನ್ನೊಮ್ಮೆ ನೋಡಿ ಪ್ರೀತಿಯ ಮದ್ದನ್ನು ಕೊಟ್ಟುಬಿಡು. ನಿನಗಾಗಿ ಕಾದಿರುವೆ.. ನಿನಗಾಗಿ ಬದುಕಿರುವೆ..!!
ಇಂತಿ ನಿನ್ನವನು..
0 Comments