ಕೃಷ್ಣಂ ಪ್ರಣಯ ಸಖಿ ಚಿತ್ರವು ರೋಮ್ಯಾಂಟಿಕ್ ಹಾಗೂ ಹಾಸ್ಯ ಚಿತ್ರವಾಗಿದ್ದು ಫ್ಯಾಮಿಲಿ ಒಟ್ಟಾಗಿ ಕೂತು ನೋಡುವಂತಹ ಚಿತ್ರವಾಗಿದೆ. ಈ ಚಿತ್ರದ ಸಂಗೀತ ಸಂಯೋಜಕರಾದ ಅರ್ಜುನ್ ಜನ್ಯ ಅವರು, ಒಂದಕ್ಕಿಂತ ಒಂದು ಅದ್ಬುತ ಹಾಡುಗಳನ್ನು ಕೊಟ್ಟಿದ್ದಾರೆ. ಹಾಡುಗಳು ಹೆಚ್ಚಾದವು ಎನ್ನುವ ಕೆಲವೊಬ್ಬರ ಹೇಳಿಕೆ ಕೇಳಿ ತುಂಬಾ ಖುಷಿಯಾಗುತ್ತೆ. ಏಕೆಂದರೆ, ಕೃಷ್ಣಂ ಪ್ರಣಯ ಸಖಿ ಚಿತ್ರ ನೋಡುವ ಕುತೂಹಲ ನಾವು ಅವರಲ್ಲಿ ಕಾಣುತ್ತೆವೆ. ಚಿತ್ರ ನೋಡುವ ಅವರ ಉತ್ಸಾಹ, ಪ್ರೀತಿಗೆ ಗೌರವಿಸಬೇಕು. ಚಿತ್ರಗಳಿಗೆ ಜೀವಂತಿಗೆ ನೀಡೋದು music ಹಾಗೂ ಹಾಡುಗಳು. ಹಾಡುಗಳನ್ನು ಆನಂದಿಸಿ, ಅಭಿಮಾನಿಸಿ ಗೌರವಿಸಿ.
ಪ್ರೀತಿಸಿ ಮದುವೆಯಾಗಿ ಯಾರದ್ದೋ ದುಕೃತ್ಯದಿಂದ ನೆನಪಿನ ಶಕ್ತಿ ಕಳೆದುಕೊಂಡು ಮತ್ತೆ ಪ್ರೀತಿಯನ್ನು ಪಡೆಯುವುದು ಈ ಚಿತ್ರವಾಗಿದೆ. ಗಣೇಶ್ ಅವರ ನಟನೆ ಎಂದ ಮೇಲೆ ಹಾಸ್ಯಕ್ಕೆ ನಗುವಿಗೆ ಕಮ್ಮಿಇಲ್ಲ. ಕುಟುಂಬವೆ ನೋಡಿ ಮೆಚ್ಚುವಂತ ಸಿನಿಮಾ. ಎಲ್ಲರೂ ಸಿನಿಮಾವನ್ನು ಚಿತ್ರರಂಗದಲ್ಲೇ ನೋಡಿ. ಕನ್ನಡ ಚಿತ್ರರಂಗವನ್ನು ಬೆಳೆಸಿ ಮತ್ತು ಉಳಿಸಿ. ಕೃಷ್ಣಂ ಪ್ರಣಯಸಖಿ ನೋಡಲು ಕಾತುರರಾಗಿದ್ದೀರಾ? ಹಾಗೂ ನೋಡಿದವರು ಇದ್ದೀರಾ? ಚಿತ್ರವನ್ನು ನೋಡಿದವರು ಹೇಗಿದೆ ಎಂದು ಕಾಮೆಂಟ್ ಮಾಡಿ.
0 Comments