ಬೆಂಗಳೂರಿನ 12 ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ : cake ban in Karnataka..!!

      ಬೆಂಗಳೂರಿನ ಹಲವಾರು ಬೇಕರಿಗಳಲ್ಲಿ ಸಂಗ್ರಹಿಸಲಾದ 12 ಕೇಕ್ ಮಾದರಿಗಳಲ್ಲಿ ಹಲವಾರು ಕ್ಯಾನ್ಸರ್ ಉಂಟುಮಾಡುವಂತಹ ಪದಾರ್ಥಗಳು ಕಂಡುಬಂದಿವೆ. ಹೀಗಾಗಿ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಸಿಹಿತಿಂಡಿಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.
🔺ಬೆಂಗಳೂರಿನ ಬೇಕರಿಗಳಲ್ಲಿ ತಯಾರಿಸಿದ ಕೇಕ್ ಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ವಸ್ತುಗಳು ಕಂಡುಬಂದಿವೆ.
🔺ಕೇಕ್ ಗಳಲ್ಲಿ ಕೆಮಿಕಲ್ ಇರುವ ಬಣ್ಣಗಳನ್ನು ಹೆರಳವಾಗಿ ಬಳಸುವುದನ್ನು ಕರ್ನಾಟಕವು ಬೇಕರಿಗಳಿಗೆ ಎಚ್ಚರಿಕೆ ನೀಡಿದೆ.
🔺ಕೆಮಿಕಲ್ ಇರುವ ಬಣ್ಣಗಳಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಹ ಹಾಳುಮಾಡುತ್ತದೆ.

     ಕರ್ನಾಟಕದ ಜನರ ಆರೋಗ್ಯದ ದೃಷ್ಟಿಯಿಂದ ಇದಾಗಲೇ ರಾಸಾಯನಿಕ ಬಣ್ಣಗಳನ್ನು ಬಳಸಿ ತಯಾರಿಸುವ ಗೋಬಿ ಮಂಚೂರಿಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ನಿಷೇಧಿಸಿತ್ತು. ಈಗ ರಾಸಾಯನಿಕ ಬಣ್ಣಗಳಿರುವ ಕೇಕ್ ಗಳನ್ನು ನಿಷೇಧಿಸಲಾಗುತ್ತಿದೆ.

     ಅತೀ ಹೆಚ್ಚು ರಾಸಾಯನಿಕಯುಕ್ತ ಜಂಕ್ ಫುಡ್ ಗಳನ್ನು ತಿನ್ನುವುದನ್ನು ನಿಲ್ಲಿಸಿ. ನಮ್ಮ ಅರೋಗ್ಯವನ್ನು ನಾವು ಸುಧಾರಿಸಿಕೊಂಡು ಹೋದಲ್ಲಿ, ನಮ್ಮ ಅರೋಗ್ಯವನ್ನು ನಮ್ಮ ಬದುಕನ್ನು ಸುಧಾರಿಕೊಂಡು ಬದುಕಬಹುದು. ಆರೋಗ್ಯವಂತ ಸಮಾಜವನ್ನು ಸೃಷ್ಟಿಸಬಹುದು. 

Post a Comment

0 Comments