ಬಿಟ್ಟೋಗಿದ್ದಿಯಾ..!! ತುಂಬಾ ವರ್ಷಗಳೇನು ಆಗಿಲ್ಲ..!! ಒಂದು ವರ್ಷ ಆಯ್ತೆನೋ ಅಷ್ಟೇ...! ಜೊತೆಗಿದ್ದಾಗ ನೀನೊಂದಿನ ಮಾತಾಡಿಲ್ಲ ಎಂದಾಗ ವರ್ಷಗಳೇ ಉರುಳಿ ಹೋಯ್ತೆನೋ ಅನ್ನೋ ಭಾವ ಕಾಡ್ತಾ ಇತ್ತು. ಆದರೆ, ಈಗ ವರ್ಷಗಳೇ ಉರುಳಿ ಹೋದ್ರು ನೀ ನನ್ನ ಜೊತೆಗೆ ಇದ್ದಿಯಾ ಅನ್ಸತ್ತೆ..!! ಯಾಕಂದ್ರೆ, ನೀನು ಕೊಟ್ಟಿರೋ ನೆನಪುಗಳು ನನ್ನನ್ನು ಯಾವತ್ತೂ ಒಂಟಿನೇ ಮಾಡಿಲ್ಲ..!! ಯಾವಾಗ್ಲೂ ಜೊತೆಯಾಗಿರತ್ತೆ. ಕೆಲವೊಮ್ಮೆ ನಗುವಾಗಿ, ಕೆಲವೊಮ್ಮೆ ಕಣ್ಣೀರಾಗಿ ನೆನಪಾಗ್ತಾನೆ ಇರತ್ತೆ..! ನನ್ನ ಬದುಕು ಎಷ್ಟು ಬದಲಾದ್ರೂ ಸಹ, ನಾನು ಎಷ್ಟು ಬದಲಾದ್ರು ಸಹ ನಿನ್ನ ಸ್ಥಾನ ಬದಲಾಗಲ್ಲ.. ನಿನ್ನ ಸ್ಥಾನ ಬದಲಾಗೋಕೆ ನಿನ್ನ ನೆನಪುಗಳು ಕೂಡ ಬಿಡಲ್ಲ.. ನನ್ನ ಮನಸಲ್ಲಿ ಅಚ್ಚೋತ್ತಿದಂತಿರುವ ನಿನಗೆ, ನನ್ನ ಹಣೆಬರಹದಲ್ಲಿ ಹಾಗೇ ನನ್ನ ಬದುಕಲ್ಲಿ ಜಾಗವಿಲ್ಲವ.? ಅನ್ನೋದೇ ಅಚ್ಚರಿ..!₹ ಏನೇ ಇರಲಿ ಬದುಕಿನ ಕೊನೆವರೆಗೂ ನಿನ್ನ ನೆನುಪುಗಳೊಂದಿಗೆ ಬದುಕ್ತೇನೆ. ❤️
ನನ್ನ ಕನಸಿನ ಬದುಕು ನೀನು..!
ನನ್ನ ಬದುಕಿನ ನೆನಪು ನೀನು..!
Ganga💫
0 Comments