Biggboss 11 kannada : ಬುರುಡೆ ಒಡೆಯೋ ಮಾತುಗಳು ಹಾಗೂ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಜಗಳ ಕಾರಣ ಇಲ್ಲಿದೆ

ಬಿಗ್ ಬಾಸ್ ಸೀಸನ್ 11 : ಕನ್ನಡದ  ಮನೆ ಮಾತಾಗಿರುವ ರಿಯಾಲಿಟಿ ಶೋ ಇದೀಗ ಎಲ್ಲರ ಮನಸೆಳೆದಿದೆ. 50 ದಿನಗಳು ಹೋಗಿದ್ದು ಗೊತ್ತಾಗಲಿಲ್ಲ.. ನಗು, ನೋವು, ಆಟ, ಮುನಿಸು, ಗೆಲುವಿನ ನಡುವೆ ದಿನಗಳು ಕಳೆದದ್ದು ಗೊತ್ತಾಗುತ್ತಿಲ್ಲ. 
ಹಾಗೆಯೇ ಕಳೆದ ಎರಡು ವಾರಗಳ ಹಿಂದೆಯೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರುವ ರಜತ್ ಅವರಿಗೂ ಕ್ಯಾಪ್ಟನ್ ಮಂಜು ಅವರ ನಡುವೆ ಇದೀಗ ಜಗಳವಾಗಿದ್ದು. ಬುರುಡೆ ಒಡೆಯುವಂತಹ ಮಾತುಗಳು ಸಹ ಬಂದಿದ್ದಾವೆ. 

ಈ ವಾರದ ಟಾಸ್ಕ್ ಅಲ್ಲಿ ಎರಡು ಗುಂಪುಗಳಾಗಿ ಮಾಡಿ ಮಂಜು ಅವರನ್ನು ಮಹಾರಾಜಾ ಹಾಗೂ ಮೋಕ್ಷಿತಾ ಅವರನ್ನು ಯುವರಾಣಿ ಆಗಿ ಮಾಡಲಾಗಿದೆ. ಹಾಗೇ ಯಾವ ತಂಡದವರು ಗೆಲ್ಲುತ್ತಾರೆ ಅವರು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಆಗುತ್ತಾರೆ. ಇದೀಗ ಮಣ್ಣಿನ ಆಟವನ್ನು ಬಿಗ್ ಬಾಸ್ ನೀಡಿರುತ್ತಾರೆ. ಅದರ ನಡುವೆ ತಳ್ಳಾಟ ಗುದ್ದಾಟ ನಡೆದಿದೆ ಎರಡು ಗುಂಪುಗಳ ನಡುವೆ.
ಇನ್ನೂ ನೀವು ಇಷ್ಟೇ ತಳ್ಳಿದ್ದೆ ಆದಲ್ಲಿ, ಬುರುಡೆ ಒಡೆದು ಹಾಕ್ತಿನಿ ಎಂದಿದ್ದಾರೆ ರಜತ್. ಬುರುಡೆ ಒಡೆದುಹಾಕ್ತಿಯ ನಮಗೇನು ಸಾಮರ್ಥ್ಯ ಇಲ್ದೇ ಇಲ್ಲಿವರೆಗೂ ಬಂದಿದ್ವ ಅಂತ ಮಂಜು ವಾದ ಮಾಡಿದ್ದಾರೆ. ಇಷ್ಟುದಿನ ಒಂದು ಲೆಕ್ಕ ಇನ್ಮುಂದೆ ಒಂದು ಲೆಕ್ಕ ನೋಡೋಣ ಎಂದಿದ್ದಾರೆ ರಜತ್. 

ಯಾವ ತಂಡ ಗೆಲ್ಲುತ್ತೆ. ಯಾರು ಈಸಲ ಕ್ಯಾಪ್ಟನ್ ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೇ. ಕಾದು ನೋಡೋಣ 💫

Post a Comment

0 Comments