ಹೌದು..!! ವಾರಂತ್ಯದ ಕಿಚ್ಚನ ಪಂಚಾತಿಯಲ್ಲಿ ಆರನೇ ವಾರದ ಎಲಿಮಿನೇಷನ್ ಇಲ್ಲವೆಂದು ಎಲ್ಲಾ ವೀಕ್ಷಕರಿಗೂ ಗೊತ್ತಿತ್ತು. ಆದರೆ, ಮನೆಯೊಳಗಿರುವ ಸ್ಪರ್ಧಿಗಳು ಇವತ್ತು ಯಾರಾದ್ರೂ ಒಬ್ಬರು ಮನೆಗೆ ಹೋಗ್ತಾರೆ ಅನ್ನೋ ಭಯದಿಂದ ಕಾದು ನೋಡುತ್ತಿದ್ದರು. ಎಲ್ಲರೂ ಸೇಫಾದ ನಂತರ ಭವ್ಯ ಅವರು ಹಾಗೂ ಧನರಾಜ್ ಅವರು ಡೇಂಜರ್ ಜೋನ್ ಅಲ್ಲಿದ್ದರು. ಎಲಿಮಿನೇಷನ್ ಪ್ರಕ್ರಿಯೆ ಮುಗಿಯುವವರೆಗೂ ಎಲ್ಲಾ ಸ್ಪರ್ಧಿಗಳು ಮಾತನಾಡದೆ ಫ್ರೀಜ್ ಆಗಬೇಕೆಂದು ಆದೇಶ ನೀಡಿದ್ದರು.
ಕೊನೆಗೆ, ಭವ್ಯ ಅವರಿಗೆ ಮನೆಯಿಂದ ಹೊರ ಕಳುಹಿಸುವುದಾಗಿ ಬಿಗ್ ಬಾಸ್ ಹೇಳುತ್ತಾರೆ. ಎಲ್ಲರ ಕಣ್ಣಲ್ಲೂ ಆಶ್ಚರ್ಯ, ಕಣ್ಣೀರು ಬಿಟ್ಟರೆ ಮಾತಾಡಿವಂತಿರಲಿಲ್ಲ. ಭವ್ಯ ಅವರು ಮನೆಯಲ್ಲಿ ಮುಖ್ಯದ್ವಾರದ ಬಳಿಗೆ ಹೋಗಿ ಮರಳಿ ಬಂದು ತನ್ನ ಪ್ರೀತಿಯ ಸ್ನೇಹಿತ ತ್ರಿವಿಕ್ರಮನಿಗೆ ಕಾಣಿಕೆಯಾಗಿ ಏನನ್ನೋ ಕೊಟ್ಟು, ಗೆದ್ದು ಬಾ ಎಂದು ಹೇಳಿ ಮರಳಿ ಬಾಗಿಲ ಬಳಿ ಹೋಗುತ್ತಾರೆ. ಆ ದೃಶ್ಯ ಕಂಡು ಕಣ್ಣಂಚಲ್ಲಿ ನೀರು ಬಂದಿದ್ದಂತು ಸತ್ಯ. ಕೊನೆಗೆ, ಇದು ಫ್ರಾಂಕ್ ಎಲಿಮಿನೇಷನ್ ಎಂದು ಗೊತ್ತಾದಾಗ ಭವ್ಯ ಹಾಗೂ ಮನೆಯ ಕೆಲವರ ಖುಷಿ ನೋಡುವುದಕ್ಕೆ ಕಣ್ಣು ಸಾಲದ್ದಾಗಿತ್ತು.
0 Comments