1)ಸಂವಹನ ಬದಲಾವಣೆ : ನಿಮ್ಮನ್ನು ಪ್ರೀತಿಸುತ್ತಿರುವವರು ಕಡಿಮೆ ಮಾತಾಡುತ್ತಾರೆ ಅಥವಾ ನಿಮ್ಮನ್ನು ನಿರ್ಲಕ್ಷಿಸುತ್ತಾರೆ ಎಂದೆನಿಸಿದರೆ ಆಗಿನಿಂದಲೇ ನೀವು ಎಚ್ಚೆತ್ತುಕೊಳ್ಳುವುದು ಉತ್ತಮ.
2)ಸ್ವಭಾವ ಬದಲಾವಣೆ : ಅವರ ವರ್ತನೆ ತೀವ್ರವಾಗಿ ಬದಲಾಗುತ್ತದೆ. ಅಂದರೆ, ಮೊದಲು ಎಲ್ಲವನ್ನೂ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದವರು ರಹಸ್ಯವಾಗಿ ಮುಚ್ಚಿಡಲು ಶುರುಮಡುತ್ತಾರೆ. ಅದು ನಿಮಗೆ ಅರಿವಿಗೆ ಬಂದಾಗ ಅದಕ್ಕೆ ನೂರಾರು ಸುಳ್ಳಿಗಳಿಂದ ಮುಚ್ಚಲು ಪ್ರಯತ್ನಿಸುತ್ತಾರೆ.
3)ಸಮಯ : ಅವರು ನಿಮ್ಮೊಟ್ಟಿಗೆ ಸಮಯ ಕಳೆಯುವುದನ್ನು ನಿಲ್ಲಿಸಿಬಿಡುತ್ತಾರೆ. ಸ್ನೇಹಿತರೊಂದಿಗೆ, bestie ಜೊತೆಗೆ ಸಮತಾ ಕಳೆಯಿತ್ತಿರುವುದನ್ನು ಮುಚ್ಚಿಡುತ್ತಾರೆ. ನಿಮಗೆ ನೂರೆಂಟು ಕಾರಣ ಹೇಳಿ ಸಿತ್ತು ಮಾಡಲು ಶುರು ಮಾಡುತ್ತಾರೆ.
4) SOCIAL MEDIA : ಅವರು ನಿಮ್ಮೊಟ್ಟಿಗೆ ಮೊದಲಿದ್ದ ಹಾಗೇ ಇರುವುದಿಲ್ಲ. ಅವರ ಫೋನ್, ಮೆಸೇಜ್ ಅಥವಾ ಇಮೇಲ್ ಗಳನ್ನು ಹೆಚ್ಚು ರಹಸ್ಯವಾಗಿ ಬಳಸಲು ಶುರುಮಡುತ್ತಾರೆ.
5) ಶಾರೀರಕ ಮತ್ತು ಮಾನಸಿಕ ದೂರ : ಅವರು ನಿಮ್ಮಿಂದ ದೂರವಾಗುತ್ತಿರುವ ಅನುಭವ ನಿಮಗೆ ಮಾನಸಿಕವಾಗಿ ಅನುಭವ ಆಗುತ್ತಿದ್ದರೆ, ನಿಮಗೆ ಮಾನಸಿಕವಾಗಿ ಇಲ್ಲದನ್ನೆಲ್ಲ ಹಿಂಸೆ ಕೊಟ್ಟರೆ ನೀವು ಆಗಲೇ ಅರಿತುಕೊಳ್ಳಬೇಕು.
ಪ್ರೀತಿ ಎನ್ನುವುದು ಎರಡು ದೇಹಗಳ ಸಮ್ಮಿಲನವಲ್ಲ. ಎರಡು ಮನಸುಗಳ ಸಮ್ಮಿಲನ. ಜವಾಬ್ದಾರಿಯಿಂದ ಪ್ರೀತಿಯೇ ದೈವವೆಂದು ನಂಬಿದವರಿಗಿಂತ, ಜೀವಕ್ಕಿಂತ ಹೆಚ್ಚು ಪ್ರೀತಿಸುವವರಿಗೆ ಮೋಸ ಮಾಡಿ ಜೀವ ತೆಗೆದುಕೊಂಡವರೇ ಹೆಚ್ಚು. ಇವು ಕೇವಲ ಸೂಚನೆಗಳು ಮಾತ್ರ. ಆದರೆ, ನಿಖರವಾಗಿ ಗೊತ್ತಾಗಲು ನೇರವಾಗಿ ಕೇಳಿ ಆ ಸಂಬಂಧವನ್ನು ಮುಗಿಸಿಬಿಡಿ. ಇಲ್ಲವಾದರೆ, ನಿಮ್ಮ ಬದುಕೇ ಮುಳುಗಿಹೋಗಬಹುದು.
0 Comments