ಎಷ್ಟೇ ಬಡತನವಿದ್ದರೂ ಓದುವ ಛಲದಿಂದ, ತಂದೆಯ ಪ್ರೋತ್ಸಾಹದ ಬಲದಿಂದ ಇಂದು ಈ ವ್ಯಕ್ತಿ ಈ ಮಟ್ಟಿಗೆ ಬೆಳೆದಿದ್ದಾರೆ. ಇಂಗ್ಲಿಷ್ ಕೂಡ ಮಾತಾಡೋಕೆ ಬರದೇ ಹೋದರೂ, ಇಂಗ್ಲಿಷ್ ಅನ್ನು ಕಲಿತು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು 2021 ರಿಂದಲೇ ತಮ್ಮ ಈ ಸಾಧನೆಯ ಬುನಾದಿಯನ್ನು ಶುರು ಮಾಡ್ತಾರೆ. ಇವರು ಬರೀ ಓದಿಗೆ ಸಮಯ ಮೀಸಲಿಟ್ಟು ಇಂದು ಯಾರು ಊಹಿಸಲಾಗದಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಎಷ್ಟೋ ಜನರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ. ತನ್ನ ಈ ಪರಿಶ್ರಮದ ಹಿಂದೆ ತನ್ನ ತಂದೆಯಾ ಪ್ರೋತ್ಸಾಹ ಹಾಗೂ ತನ್ನ ಪರಿಶ್ರಮದ ಬಗ್ಗೆ ಮನಬಿಚ್ಚಿ ಹೇಳಿಕೊಂಡಿದ್ದಾರೆ. ತನ್ನ ಅಣ್ಣನು ಕೂಡ ಆರ್ಮಿ ಅಲ್ಲಿ ಇದ್ದಾರೆಂದು ಹೇಳಿದ್ದಾರೆ.
ಮಹಾರಾಷ್ಟ್ರ ಮೂಲವಾದರೂ ಮರಾಠಿ ಮಾತೃ ಭಾಷೆಯಾದರೂ ಕನ್ನಡಲ್ಲಿಯೇ ಮಾತಾಡಿ ಎಲ್ಲವನ್ನೂ ಹೇಳಿದ್ದಾರೆ. ಇಂತಹ ಬಡ ಸಾಧಕರು, ಸಾಧನೆಯಲ್ಲಿ ಶ್ರೀಮಂತರು.
ಯಾರ ಸಮಯ ಹೇಗಿರುತ್ತೆ ಅನ್ನೋದಕ್ಕಿಂತ, ಯಾರ ಪರಿಶ್ರಮ ಎಷ್ಟು ಗಟ್ಟಿಯಾಗಿರತ್ತೆ ಅನ್ನೋದರ ಮೇಲೆ ಅದೃಷ್ಟದ ಹಣೆಬರಹವಿರತ್ತೆ.
0 Comments