೧.]ಹಳೆಯ ನೆನಪುಗಳನ್ನು ನಿಲ್ಲಿಸಿ
ನಿಮ್ಮ ಪ್ರೇಮಿ ನೀಡಿದ ಉಡುಗೊರೆಗಳು, ಫೋಟೋಗಳು ಅವರ ಮೆಸೇಜ್ಗಳು ನಿಮಗೆ ಇನ್ನೂ ಅವರ ನೆನಪುಗಳನ್ನು ತರಿಸುವಂತೆ ಮಾಡಬಹುದು. ಆದ್ದರಿಂದ ಎಲ್ಲವನ್ನು ಡಿಲೀಟ್ ಮಾಡೋದು ಅಥವಾ ನೋಡೋದೇ ಇರೋದು ಉತ್ತಮ.
೨. ಹವ್ಯಾಸಗಳು
ನಿಮ್ಮ ಮನಸ್ಸನ್ನು ಬೇರೆ ಕಾರ್ಯಗಳಲ್ಲಿ ತೊಡಗಿಸಿ. ಹೊಸ ಹವ್ಯಾಸಗಳನ್ನು ರೂಡಿಸಿಕೊಳ್ಳಿ. ಓದಿನಲ್ಲಿ ಅಥವಾ ಕೆಲಸದಲ್ಲಿ ಗಮನ ಹರಿಸಿ ಇದರಿಂದ ನಿಮ್ಮ ಮೈಂಡ್ ಡಿಸ್ಟರ್ಬ್ ಆಗೋದಿಲ್ಲ. ಹಾಗೆ ನಿಮ್ಮ ಮನಸ್ಸು ಕೂಡ ಬದಲಾಗುತ್ತೆ.
೩] ಭಾವನೆಗಳನ್ನು ಒಪ್ಪಿಕೊಳ್ಳಿ
ನಿಮಗೆ ಬ್ರೇಕ್ಅಪ್ ಆಗಿದೆ, ಹಾಗೆ ನಿಮ್ಮನ್ನು ತುಂಬಾ ಪ್ರೀತಿಸಿದ ವ್ಯಕ್ತಿ ನಿಮ್ಮ ಬದುಕಲ್ಲಿ ಇಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಿ. ಆ ಕಟು ಸತ್ಯವನ್ನು ನೀವು ಒಪ್ಪಿಕೊಂಡರೆ ನಿಮ್ಮ ನೋವಿನ ಭಾವನೆಗಳಿಂದ ಹೊರಬಂದು ಮುಂದೆ ಜೀವನ ಸಾಗಿಸೋಕೆ ಸುಲಭವಾಗುತ್ತೆ.
೪] ಸಾಮಾಜಿಕ ಮಾಧ್ಯಮಗಳು
ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಿಂಬಾಲಿಸಬೇಡಿ, ಅವರ ಫೋಟೋಗಳು ಮತ್ತು ಅವರ ಹೊಸ ಬದುಕಿನ ಅಪ್ಡೇಟ್ಗಳನ್ನು ನೋಡ್ತಾ ಹೋದರೆ ಮತ್ತೆ ನೀವು ಹಳೆ ನೆನಪುಗಳನ್ನು ಗುರಿಯಾಗಬಹುದು ಆದ್ದರಿಂದ ಮೊದಲು ಆ ಸುಳಿಯಿಂದ ಹೊರಬನ್ನಿ.
೫] ನೀವೊಂದು ಅದ್ಭುತ ವ್ಯಕ್ತಿ
ನೀವು ತುಂಬಾ ಅಮೂಲ್ಯವಾದ ವ್ಯಕ್ತಿ ಅನ್ನುವುದನ್ನು ಒಪ್ಪಿಕೊಳ್ಳಿ. ನಿಮ್ಮಲ್ಲಿರುವ ಕಲೆಗಳ ಬಗ್ಗೆ, ಆತ್ಮವಿಶ್ವಾಸದ ಬಗ್ಗೆ ಗೌರವ ಮೂಡಿಸಿಕೊಳ್ಳಿ. ನಿಮ್ಮ ಬದುಕು ಕಟ್ಟಿಕೊಳ್ಳಲು ನಿಮ್ಮಲ್ಲೂ ಶಕ್ತಿ ಇದೆ ಇದರಿಂದ ನೋವನ್ನು ಸುಲಭವಾಗಿ ಮರೆಯಬಹುದು.
೬] ಕುಟುಂಬ ಮತ್ತು ಸ್ನೇಹಿತರು
ಸ್ನೇಹಿತರ ಜೊತೆ ಕುಟುಂಬದವರ ಜೊತೆ ಹೆಚ್ಚು ಸಮಯವನ್ನು ಕಳೆಯಿರಿ. ನಿಮ್ಮ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ ಇದರಿಂದ ನಿಮ್ಮ ಮನಸ್ಸು ಹಗುರವಾಗುತ್ತೆ, ಕುಟುಂಬ ಹಾಗೂ ಸ್ನೇಹಿತರ ಅನುಭವದಿಂದ ಸಲಹೆ ತೆಗೆದುಕೊಳ್ಳಿ.
೭] ಭವಿಷ್ಯ
ಹಳೆ ನೆನಪುಗಳನ್ನು ಯೋಚಿಸಿ ಸಮಯ ವ್ಯರ್ಥ ಮಾಡುವುದಕ್ಕಿಂತ ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಹಾಗೆ ಗುರಿಗಳ ಬಗ್ಗೆ ಯೋಚಿಸಿ ಸಾಧಿಸುವ ದಾರಿ ಕಡೆ ಸಾಗಿ.
೮] ಸೆಲ್ಫ್ ಲವ್
ನಿಮ್ಮನ್ನು ನೀವು ಪ್ರೀತಿಸಿ ತಾಳ್ಮೆಯಿಂದ ಇರಿ, ಕಾಲ ಎಲ್ಲವನ್ನು ಬದಲಾಯಿಸುತ್ತೆ ಇಂದಿನ ನೋವು ನಾಳೆಯ ಶಕ್ತಿಯಾಗಿ ಪರಿವರ್ತನೆ ಆಗುತ್ತೆ ಧೈರ್ಯದಿಂದ ಇರಿ.
ಹಳೆ ನೆನಪುಗಳಿಂದ ಹೊರಬರುವುದಕ್ಕೆ ಕಮ್ಮಿ ಸಮಯದಲ್ಲಿ ಸಾಧ್ಯವಿಲ್ಲ ಆದರೆ ದಿನದಿಂದ ದಿನಕ್ಕೆ ನಿಮ್ಮ ಜೀವನವನ್ನು ರೂಪಿಸಿಕೊಳ್ಳೋಕೆ ಈ ಹಂತಗಳು ಸಹಾಯ ಮಾಡಬಹುದು
ನಿಮಗಾಗಿ ನೀವು, ನಿಮ್ಮಿಂದ ನೀವು..
ಮರೆಯಿರಿ ಎಲ್ಲ ನೋವು..💗
ಆಗಿಸಿಕೊಳ್ಳಿ ನಿಮ್ಮ ಬದುಕು ಬಂಗಾರದ ಹೂವು
0 Comments