ಬಿಸಿಲಿನಿಂದ ಬರುವಂತಹ ಆರೋಗ್ಯ ಸಮಸ್ಯೆಗಳು || summer health issues

ಬಿಸಿಲಿನಿಂದ ಬರುವಂತಹ ಸಮಸ್ಯೆಗಳು. ಅಂದರೆ ನೀರು ಕಮ್ಮಿ ಕುಡಿಯೋದ್ರಿಂದ, ನಮ್ಮನ್ನ ನಾವು ಕಾಳಜಿ ವಹಿಸದೆ ಇದ್ದಾಗ ಈ ಸಮಸ್ಯೆಗಳು ಬರುತ್ತವೆ.

೧] ಡಿಹೈಡ್ರೇಶನ್ :
 ಹೆಚ್ಚು ದಾಹ ಆಗಿ ಬಾಯಿ ಒಳಗೆ ಶಕ್ತಿ ಇಲ್ಲದಂತೆ ಆಗುತ್ತೆ. ಇದರಿಂದ ತಲೆನೋವು ಉಂಟಾಗುತ್ತೆ ಕೆಲವೊಮ್ಮೆ ಮೂತ್ರದ ಉರಿ ಉಂಟಾಗಿ ಶೆಖೆ ಉಂಟಾಗುತ್ತದೆ.

 ೨]ಹೀಟ್ ಸ್ಟ್ರೋಕ್
 ಅತೀ ಬಿಸಿಲಲ್ಲಿ ಓಡಾಡುವುದರಿಂದ ಹೆಚ್ಚಾಗಿ ಬೆವರ್ತೀವಿ, ಇದರಿಂದ ಚರ್ಮಕ್ಕೂ ಕೂಡ ಎಫೆಕ್ಟ್ ಆಗುತ್ತೆ ಕೆಲವೊಬ್ಬರಿಗೆ ಪ್ರಜ್ಞೆನೇ ಹೋಗಿ ತಲೆ ಸುತ್ತು ಬಂದಂತಾಗುತ್ತೆ ಹಾಗೆ ವಾಂತಿ ಕೂಡ ಆಗುತ್ತೆ.

೩]ಫುಡ್ ಪಾಯಿಸನಿಂಗ್ 
 ಕೆಲವು ಸಲ ಊಟದ ಜೀರ್ಣ ಸರಿಯಾಗಿ ಆಗದೆ ವಾಂತಿ ಭೇದಿ ಆಗುತ್ತೆ. ಇದರಿಂದ ಹೊಟ್ಟೆ ನೋವು ಸುಸ್ತು ಬರುತ್ತೆ, ದೇಹ ಕೂಡ ಕುಂದಿ ಹೋಗುತ್ತೆ.

೪]ಬಿಪಿ ಹೆಚ್ಚು ಕಮ್ಮಿ ಆಗೋದು 
ಬಿಸಿಲಿನ ತಾಪ ಹೆಚ್ಚಾಗಿ ಕೆಲವೊಮ್ಮೆ ಬಿಪಿ ಹೆಚ್ಚಾಗುತ್ತೆ ಅಥವಾ ಕಮ್ಮಿಯಾಗುತ್ತೆ. ಇದರಿಂದ ಹೃದಯದ ಸಮಸ್ಯೆಗಳು ಬರುತ್ತೆ ಕೆಲವೊಮ್ಮೆ ಬಿಪಿ ಲೋ ಇಂದ ಜೀವಕ್ಕೆ ಕುತ್ತು ಸಹ ಬರುತ್ತೆ.

೫] ಚರ್ಮದ ಸಮಸ್ಯೆ
 ಈ ಬಿಸಿಲಿನಲ್ಲಿ ಸನ್ ಬರ್ನ್ ಇಂದ ಚರ್ಮ ಕೆಂಪಾಗುತ್ತೆ ಅಥವಾ ಒಣಗತ್ತೆ. ಕೆಲವೊಬ್ಬರಿಗೆ ಹೀಟ್ ತುರಿಕೆಗಳು ಹಾಗೇ ಇನ್ನು ಕೆಲವರಿಗೆ ಮೊಡವೆಗಳಾಗುತ್ತೆ.

೬] ಮಲಬದ್ಧತೆ 
 ನೀರು ಕಡಿಮೆ ಕುಡಿಯುವುದರಿಂದ ಆಹಾರ ಜೀರ್ಣವಾಗದ ಸಮಸ್ಯೆ ಬರುತ್ತೆ ಮಲಬದ್ಧತೆ ಉಂಟಾಗುತ್ತೆ. ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಹಾಗೂ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಿ ಹೊಟ್ಟೆ ನೋವು ಕಾಣಿಸುತ್ತೆ.

೭] ಸಾಂಕ್ರಮಿಕ ರೋಗ 
 ಹೆಚ್ಚಾಗಿ ಡೆಂಗ್ಯೂ ಜ್ವರ, ಟೈಪಾಯ್ಡ್, ಮಲೇರಿಯಾ ರೀತಿಯ ವೈರಲ್ ಫೀವರ್ ಗಳು ಬರುತ್ತೆ. ಕೆಲವೊಬ್ಬರಿಗೆ ಜ್ವರ ತಲೆಗೆ ಏರಿ ಜೀವಕ್ಕೆ ಅಪಾಯ ಕೂಡ ಇರುತ್ತೆ.

 ಬಿಸಿಲಿನಿಂದ ಈ ರೀತಿಯ ತೊಂದರೆಗಳು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಇದು ದೈಹಿಕ ಆರೋಗ್ಯದ ಮೇಲೆ ಅಲ್ಲದೆ ಮಾನಸಿಕವಾಗಿ ಕೂಡ ಪರಿಣಾಮ ಬೀರಬಹುದು.
 


Post a Comment

0 Comments