◾ ನೀರು ಸೋಂಕು(UTI) ಎಂದರೇನು?ನೀರುಕೊಬ್ಬು ಸೋಂಕು(Urinary Track Infection), ಇದು ಮೂತ್ರಪಿಂಡ, ಮೂತ್ರಕೋಶ, ಮೂತ್ರನಾಳ ಅಥವಾ ಮೂತ್ರ ಮಾರ್ಗದಲ್ಲಿ ಬ್ಯಾಕ್ಟೀರಿಯದಿಂದ ಉಂಟಾಗುವಂತಹ ಸೋಂಕು ಇದು. ಈ ಸೋಂಕು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸೊಂಕಿನ ಸಮಸ್ಯೆಗೆ ತಕ್ಷಣವೇ ಚಿಕಿತ್ಸೆ ಪಡೆಯದೇ ಹೋದರೆ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ.
⭕UTI ನ ಪ್ರಮುಖ ಲಕ್ಷಣಗಳು
🔺ಮೂತ್ರವಿಸರ್ಜನೆ ಮಾಡುವಾಗ ತುಂಬಾ ಉರಿಯುವಿಕೆ ಉಂಟಾಗುತ್ತೆ.
🔺ಮೂತ್ರ ವಿಸರ್ಜನೆ ಮಾಡಿದರೂಸಹ ಪುನಹ ಮತ್ತೆ ವಿಸರ್ಜನೆ ಮಾಡಬೇಕೆಂದು ಅನಿಸುವುದು.
🔺ಮೂತ್ರವು ತುಂಬಾ ದುರ್ವಾಸನೆಯಿರುತ್ತೆ ಅಥವಾ ಘಾಡವಾದ ಬಣ್ಣವಿರುತ್ತೆ.
🔺ಸೊಂಟ ಮತ್ತು ಕೆಳಹೊಟ್ಟೆಯ ಭಾಗದಲ್ಲಿ ತುಂಬಾ ನೋವು ಇರುತ್ತೆ.
🔺ಸಾಂಕ್ರಮಿಕವಾಗಿ ಮೂತ್ರ ಪಿಂಡಗಳ ಮೇಲೆ ಪರಿಣಾಮ ಬೀರಿದ್ದರೆ ಜ್ವರ ಬರಬಹುದು
🔺ಮೂತ್ರದಲ್ಲಿ ರಕ್ತ ಬರಬಹುದು.
◾ ಯು ಟಿ ಐ ನ ತೊಂದರೆಗಳು(complications of UTI)
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೆ ಹೋದರೆ ಮೂತ್ರ ಕೋಶದ ಸೋಂಕು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತೆ ಈ ಕೆಳಗಿನ ತೊಂದರೆಗಳು ಉಂಟಾಗಬಹುದು.
🔹ಮೂತ್ರಪಿಂಡಗಳಿಗೆ ಹಾನಿ
ತುಂಬಾ ದಿನಗಳವರೆಗೆ ಚಿಕಿತ್ಸೆ ಪಡೆಯದಿದ್ದರೆ ಸೋಂಕು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು.
🔹ರಕ್ತ ಸಂಚಾರದಲ್ಲಿ ಸೋಂಕು
ರಕ್ತದ ಮೂಲಕ ದೇಹದಲ್ಲಿ ಬ್ಯಾಕ್ಟೀರಿಯ ಹರಡಿದ್ದರೆ ಜೀವಕ್ಕೆ ಅಪಾಯ ಆಗುತ್ತೆ.
🔹 ದೀರ್ಘಕಾಲದ ಯೂರಿನರಿ ಇನ್ಫೆಕ್ಷನ್
ಕೆಲವರಿಗೆ ವಾರವಾರ ಯುಟಿಐ ಸಂಭವಿಸುವ ಸಾಧ್ಯತೆ ಅಂದ್ರೆ ಎರಡು ಮೂರು ದಿನ ಕಮ್ಮಿ ಆಗೋದು ಮತ್ತೆ ಆಗೋದು ಆಗಬಹುದು.
🔹 ಗರ್ಭಿಣಿಯರಲ್ಲಿ ಅಪಾಯ
ಡೆಲಿವರಿಯಲ್ಲಿ ತೊಂದರೆ ಅಥವಾ ಕಡಿಮೆ ತೂಕವಿರುವ ಶಿಶು ಹುಟ್ಟುವ ಸಂಭವ ಹೆಚ್ಚಾಗಬಹುದು.
🔹 ಮೂತ್ರನಾಳ ಸಂಕೋಚನ
ಈ ಸೋಂಕು ಪುರುಷರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಇದರಿಂದ ಈ ಸೋಂಕು ಮೂತ್ರನಾಳವನ್ನು ಸಂಕೋಚಿಸಿ ಮೂತ್ರ ವಿಸರ್ಜನೆಗೆ ತೊಂದರೆ ಮಾಡಬಹುದು.
◾UTI ಗೆ ಪರಿಹಾರಗಳು
🔸 ಹೇರಳವಾಗಿ ನೀರು ಕುಡಿಯಿರಿ ಇದು ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
🔸 ಮೂತ್ರವನ್ನು ಜಾಸ್ತಿ ತಡೆಹಿಡಿಯಬೇಡಿ ಇದರಿಂದ ಸೋಂಕು ತೋರಿತವಾಗಿ ಹೋಗಲು ಸಹಾಯಕವಾಗುತ್ತದೆ.
🔸 ಹಸಿರು ಕಾಳು ಮೆಣಸು ತುಳಸಿ ಸೇವಿಸಿ ಇದು ಸಹಾಯಕವಾಗುತ್ತದೆ.
⭕ ಮೆಡಿಕಲ್ ಸಲಹೆಗಳು 
🔹 ಡಾಕ್ಟರ್ ಸಲಹೆಯೊಂದಿಗೆ ಆಂಟಿಬಯೋಟಿಕ್ ಔಷಧಿ ಸೇವನೆ.
🔹 ಕಡಿಮೆ ಸಕ್ಕರೆ ಆಹಾರ ಮತ್ತು ಆರೋಗ್ಯಕರ.
🔹ಆಹಾರ ಸೇವನೆ ಆರೋಗ್ಯಕರ ಶೌಚ ಪದ್ಧತಿ ಅನುಸರಿಸುವುದು ಸುರಕ್ಷಿತ.
🔹ಲೈಂಗಿಕ ಸಂಬಂಧ ಪಾಲನೆ.
0 Comments