ಪಾಕಿಸ್ತಾನದಲ್ಲಿ ವಿಮಾನದ ಬೆಂಕಿ ಅವಘಡ || ಕರ್ಮ ಕಾಣಲ್ಲ, ಕಾಡತ್ತೆ ಅನ್ನೋದಕ್ಕೆ ಇದೆ ಸಾಕ್ಷಿ

ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಅವಘಡ :

ಪಾಕಿಸ್ತಾನದ ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲವೂ ಅಸ್ತವ್ಯಸ್ತವಾಗಿದ್ದು, ಎಲ್ಲಾ ವಿಮಾನಗಳ ಹಾರಾಟ ರದ್ದಾಯಿತು.
ಭಾರತದವರ ಮೇಲೆ ದಾಳಿ ಮಾಡಿ ಅಮಾಯಕರ ಜೀವ ತೆಗೆದುಕೊಂಡು  ಕೆಲವೇ ದಿನಗಳು ಕಳೆದಿಲ್ಲ. ಪಹಾಲ್ಗಮ್ ದಾಳಿಯ ಬೆನ್ನಲ್ಲೇ ಹೀಗಾಗಿರುವುದು ಪಾಕಿಸ್ಥಾನಕ್ಕೆ ಕರ್ಮದ ಸೂಚನೆಯೇ ಇರಬಹುದು.

ಪಾಕಿಸ್ತಾನ ಸೇನಾ ವಿಮಾನವೊಂದು ಕೆಳಗೆ ಇಳಿಯುತ್ತಿದ್ದಾಗ ಅದರ ಟೈರ್‌ಗೆ ಬೆಂಕಿ ಹೊತ್ತಿಕೊಂಡಾಗ ಇದೆಲ್ಲಾ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯಿಂದಾಗಿ, ವಿಮಾನ ನಿಲ್ದಾಣವು ಸ್ವಲ್ಪ ಸಮಯದವರೆಗೆ ರನ್‌ವೇಯನ್ನು ಮುಚ್ಚಬೇಕಾಯಿತು.
ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಇದೇ ಮೊದಲಲ್ಲ. ಪಾಕಿಸ್ತಾನದ ವಿಮಾನ ನಿಲ್ದಾಣಗಳಲ್ಲಿನ ಸುರಕ್ಷತಾ ಸಮಸ್ಯೆಗಳು ಸ್ವಲ್ಪ ಸಮಯದಿಂದ ಕಳವಳಕಾರಿಯಾಗಿವೆ.

ಕಳೆದ ವರ್ಷ, ಮೇ 9 ರಂದು,  - ಅದೇ ವಿಮಾನ ನಿಲ್ದಾಣದಲ್ಲಿ ವಲಸೆ ಕೌಂಟರ್ ಬಳಿಯ ಸೀಲಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ  ಬೆಂಕಿ ಕಾಣಿಸಿಕೊಂಡಿತು. ಇದು ಇಡೀ ವಲಸೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು ಮತ್ತು ಪ್ರಮುಖ ವಿಳಂಬಗಳಿಗೆ ಕಾರಣವಾಯಿತು. 

ಅಮಾಯಕರ ಅಳಲು, ನೋವಿಗೆ ಕರ್ಮದ ಉತ್ತರ ಏನೇನಿರತ್ತೆ  ಕಾದು ನೋಡೋಣ.

Post a Comment

0 Comments