ಬಿಪಿ ಹೆಚ್ಚಾಗೋದಕ್ಕೆ ಇವೆ ಕಾರಣಗಳು || High blood pressure

ಬಿಪಿ(ರಕ್ತದೊತ್ತಡ) ಯಾಕೆ ಹೆಚ್ಚಾಗುತ್ತದೆ?

ಇಂದು ಬಹಳ  ಜನರು ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬಿಪಿ ಅಂದರೆ ರಕ್ತದೊತ್ತಡ. ಇದು ಹೃದಯದಿಂದ ರಕ್ತವನ್ನು ಶರೀರದ ಭಾಗಗಳಿಗೆ ತುರ್ತು ಶಕ್ತಿಯಿಂದ ಒತ್ತಿಸುವ ಮಟ್ಟವನ್ನು ಸೂಚಿಸುತ್ತದೆ. ಕೆಲವೊಮ್ಮೆ ಈ ಒತ್ತಡ ಹೆಚ್ಚು ಆಗುತ್ತದೆ. ಇದರ ಹಿಂದೆ ಹಲವಾರು ಕಾರಣಗಳಿವೆ:

1. ಅನಾರೋಗ್ಯಕರ ಆಹಾರ ಅಭ್ಯಾಸ

ಹೆಚ್ಚಾಗಿ ಉಪ್ಪು ಸೇವನೆ ಮಾಡುವುದು ಬಿಪಿ ಹೆಚ್ಚಾಗೋದಕ್ಕೆ ಕಾರಣವಾಗತ್ತೆ. ಹಾಗು ಕೊಬ್ಬಿನ ಅಂಶವಿರುವಂತಹ ಆಹಾರವನ್ನು ಸೇವಿಸುವದರಿಂದ ಕೂಡ ಬಿಪಿ ಹೆಚ್ಚಾಗುತ್ತೆ.


2. ತಾಜಾ ಹಣ್ಣು-ತರಕಾರಿಗಳ ಕೊರತೆ

ದಿನಪೂರ್ತಿ ಯಾವುದೇ ಕೆಲಸ ಮಾಡದೇ ಕುಳಿತಲ್ಲಿಯೇ ಕೂರುವುದರಿಂದ ಶರೀರದ ಅಂಗಗಳ ಚಟುವಟಿಕೆ ಕೊರತೆಯಾಗತ್ತೆ. ವ್ಯಾಯಾಮವು ಮಾಡದೇ, ಅತೀ ಹೆಚ್ಚು ಜಂಕ್ ಫುಡ್ ಗಳನ್ನು ಸೇವಿಸುವದರಿಂದ ಬಿಪಿ ಹೆಚ್ಚಾಗತ್ತೆ.


3. ತೂಕ ಹೆಚ್ಚಳ (ಅಧಿಕ ತೂಕ)

ಹೆಚ್ಚು ತೂಕ ಇದ್ದವರಿಗೆ ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ, ಇದು ಬಿಪಿಯನ್ನು ಹೆಚ್ಚಿಸುತ್ತದೆ.
ವ್ಯಾಯಾಮವಿಲ್ಲದ ಜೀವನ ಶೈಲಿ ಇದಕ್ಕೆ ಕಾರಣ.


4. ಮಾನಸಿಕ ಒತ್ತಡ ಮತ್ತು ದಣಿವು

ನಿರಂತರ ಕೇಸ ಮಾಡೋದು  ಹಾಗೇ ಅತಿಯಾಗಿ ಚಿಂತೆ ಮಾಡೋದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಒತ್ತಡ ಹೆಚ್ಚಾಗತ್ತೆ. ಕೆಲವೊಬ್ಬರು ನಿದ್ದೆ ಸರಿಯಾಗಿ ಮಾಡಲ್ಲ. ನಿದ್ರೆಯ ಕೊರತೆಯಿಂದ ಕೂಡ ಬಿಪಿ ಹೆಚ್ಚಾಗಬಹುದು.


5. ಮದ್ಯಪಾನ ಮತ್ತು ಧೂಮಪಾನ

ಮದ್ಯಪಾನ ಹಾಗೂ ಧೂಮಪಾನ ರಕ್ತನಾಳಗಳನ್ನು ಹಾನಿ ಮಾಡುತ್ತವೆ, ಇದು ಬಿಪಿಯನ್ನು ಹೆಚ್ಚಿಸುತ್ತದೆ.


6. ವಂಶಪಾರಂಪರ್ಯ ಮತ್ತು ವಯಸ್ಸು

ಕುಟುಂಬದಲ್ಲಿ ಯಾರಿಗಾದರೂ ಬಿಪಿ ಇದ್ದರೆ ನಿಮ್ಮಲ್ಲೂ ಬಿಪಿ ಬರುವ ಸಾಧ್ಯತೆ ಇರುತ್ತದೆ.
ವಯಸ್ಸು ಜಾಸ್ತಿಯಾದಂತೆ ರಕ್ತನಾಳಗಳು ಕಠಿಣವಾಗುತ್ತವೆ, ಇದರಿಂದ ಬಿಪಿ ಹೆಚ್ಚಬಹುದು.


7. ಇತರ ಆರೋಗ್ಯ ಸಮಸ್ಯೆಗಳು

ಮಧುಮೇಹ (ಡಯಾಬಿಟಿಸ್), ಮೂತ್ರಪಿಂಡದ (ಕಿಡ್ನಿ) ರೋಗಗಳು, ಥೈರಾಯ್ಡ್ ಸಮಸ್ಯೆಗಳು ಈರೀತಿಯ ಆರೋಗ್ಯ ಸಮಸ್ಯೆಗಳು ಇದ್ದರೂ ಕೂಡ ಬಿಪಿ ಹೆಚ್ಚಾಗೋ ಸಾಧ್ಯತೆ ಇರುತ್ತದೆ.



ಹೀಗಾಗಿ, ಆರೋಗ್ಯಕರ ಆಹಾರ, ನಿತ್ಯ ವ್ಯಾಯಾಮ, ಸರಿಯಾದ ಸಮಯಕ್ಕೆ ನಿದ್ರೆ, ಮಾನಸಿಕ ಒತ್ತಡವಿಲ್ಲದ ತಾಜಾ ಮನಸ್ಸು ಇವುಗಳನ್ನು ಉಳಿಸಿಕೊಂಡರೆ ಬಿಪಿಯನ್ನು ತಡೆಯಬಹುದು.



Post a Comment

0 Comments