ಈ ಘಟನೆಯಲ್ಲಿ ಉಗ್ರರು ಈ ಘೋಷಣೆಯನ್ನು ಉಚ್ಚರಿಸದವರ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಿದ ಘಟನೆಗಳು ಕಂಡು ಬಂದಿವೆ. ಇದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಒಂದು ಧರ್ಮಾಧಾರಿತ ಗುರುತಿನ ಆಧಾರದ ಮೇಲೆ ನಡೆದ ಕ್ರೂರ ಹತ್ಯೆ ಎಂದು ಸಾಮಾಜಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ಯಾವುದೇ ಧರ್ಮವೂ ಕೂಡ ಜನರನ್ನು ಸಾಯಿಸಿ ಎಂದು ಹೇಳಿಲ್ಲ. ಈ ತರಹದ ದಾಳಿಗಳು ಮಾನವೀಯತೆಯ ವಿರುದ್ಧವಾಗಿದ್ದು, ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಬೇಕು. ಸರ್ಕಾರ ಮತ್ತು ಭದ್ರತಾ ಪಡೆಗಳು ಈ ಕುರಿತು ಕ್ರಮ ಕೈಗೊಂಡಿದ್ದು, ತನಿಖೆ ನಡೆಯುತ್ತಿದೆ.
0 Comments