ನಾನೇ ನಿನ್ನ ಪ್ರೀತಿಸಿದ್ದು, ಹಾಗೇ ಪ್ರೀತಿಸ್ತೀರೋದು || one side love story



ಓಯ್ ಕೇಳಿಲ್ಲಿ..!! ನೀ ನನ್ನ ಕಾಡ್ತಿರೋದು ಆದ್ರೂ ಯಾಕೆ? ಕನಸಲ್ಲಿ, ಕನವರಿಕೆಯಲ್ಲಿ ಪದೇ ಪದೇ ಕಾಡ್ತಿರೋದು ಯಾಕೆ? ನನಗೆ ಅರ್ಥ ಆಗೋ ಭಾವನೆಯಲ್ಲಿ ಹೇಳ್ಬೇಕಂದ್ರೆ ನನಗೆ ನಿನ್ಮೇಲೆ ಪ್ರೀತಿ ಆಗಿದೆ.. ಆದ್ರೆ, ನನ್ನ ಪ್ರೀತಿ ಮೇಲೆ ನಿನಗಿನ್ನೂ ಸಂದೇಹ ಯಾಕಿದೆ? ನಿನ್ನನ್ನ ನೋಡಿದ್ಮೇಲೆ, ನಿನ್ನ ಬಂಗಾರದಂತಹ ಗುಣ ನೋಡಿದ್ಮೇಲೆ ನೀನೇ ಮೊದಲು ನೀನೇ ಕೊನೆ ಅಂತ ನನ್ನ ಹೃದಯಾನ ನಿನಗೆ ಅಂದೇ ಮುಡಿಪಿಟ್ಟೆ.. ಆದ್ರೆ ಅಂದೇ ನನ್ನ ಪ್ರೀತಿನ ನಿನಗೆ ಹೇಳೋದು ಮರೆತುಬಿಟ್ಟೆ.. ಯಾಕಂದ್ರೆ, ಆಗಿನ್ನೂ ಯೌವ್ವನದ ವಯಸ್ಸು.. ಅಯ್ಯೋ ಇದೇನೋ ಆಕರ್ಷಣೆಯ ಹುಮ್ಮಸ್ಸು.. ಅನ್ಕೊಂಡು ಸುಮ್ನೆ ಆಗಿದ್ದಂತೂ ಸತ್ಯ.. ಹಾಗೇ ಅದು ಆಕರ್ಷಣೆ ಅಲ್ಲ, ಪ್ರೀತಿ ಅನ್ನೋದು ಕೂಡ ಸತ್ಯ..! ಬುದ್ಧಿ ಬಂದಿರೋ ವಯಸ್ಸಲ್ಲಿ ಇಷ್ಟ ಆಗಿದ್ದು ನೀನು, ಹಾಗೇ ಇವಾಗ ಜವಾಬ್ದಾರಿ ಬಂದಿರೋ ವಯಸ್ಸಲ್ಲಿ ಕೂಡ ನಿನ್ನನ್ನೇ ಪ್ರೀತಿಸ್ತೀದಿನಿ. ಅಂದ್ರೆ ಇದು ಪ್ರೀತಿನೇ ತಾನೇ?? ಹೇಳು ನೀನೇ..!!
ಹಾಗೋ ಹೀಗೋ ನಿನ್ನ ಭೇಟಿ ಮಾಡೋಕೆ ಪಟ್ಟ ಪಾಡು ಅಷ್ಟಿಷ್ಟಲ್ಲ.. ಭೇಟಿ ಆದ್ಮೇಲೆ ಮಾತಾಡೋಕೆ ಕಷ್ಟ ಪಟ್ಟಿದ್ದು ಕೂಡ ಅಷ್ಟಿಷ್ಟಲ್ಲ..!! ನೂರು ಜನರ ನಡುವೆ ನಿನ್ನನ್ನೇ ಹುಡುಕ್ತಿದ್ದ ನನಗೆ, ನೀನು ಬಂದು ಮಾತಾಡಿಸಿದ ಕ್ಷಣ ಎಂದಿಗೂ ಮರೆಯದ ಕ್ಷಣ..!! ಖುಷಿಯನಂತೂ ತೋರಿಸೋಕೆ ಆಗ್ದೇ ಇರೋ ಪರಿಸ್ಥಿತಿ.. ಎದುರಿಗೆ ಸಿಕ್ಕರೂ ಏನು ಮಾತಾಡಬೇಕು ಎನ್ನುವ ಭಯದ ಪಜೀತಿ.. ಅಂತೂ ಇಂತೂ ಧೈರ್ಯ ಮಾಡಿ ನಾನು ನಿನ್ನ ಮೊಬೈಲ್ ನಂಬರ್ ಕೇಳಿ ತಗೊಂಡಿದ್ದು ನನಗೆ ಇನ್ನೂ ಆಶ್ಚರ್ಯ..!! ಇಂದು ಸಿಕ್ಕಿರುವ ನೀನು ಮತ್ತೆ ಸಿಗುವೆಯೋ ಇಲ್ಲವೋ ಎನ್ನುವ ಭಯದಲ್ಲಿ ನಾನೇನು ಮಾಡಿದೆನು ಎನ್ನುವುದು ಆಮೇಲೆಯೇ ಅರಿವಾದದ್ದು..! ಇನ್ನೇನು ಕೈ ಜಾರಿದ ಪ್ರೀತಿ ಸಿಕ್ಕಿತು ಅನ್ನೋ ಖುಷಿ.. ಯಾವಾಗ ನಿನ್ನ ಜೊತೆ ಮಾತಾಡುವೆ ಅನ್ನೋ ಹಂಬಲ.. ಅಷ್ಟಿಷ್ಟಲ್ಲ..!! ಮೆಸೇಜ್ ಮಾಡೋದೇನೋ ಶುರುವಾಯ್ತು.. ಊಟ ತಿಂಡಿ ಹಾಯ್ ಬಾಯ್ ಅಲ್ಲೇ ಮುಗದೋಯ್ತು.. ನನಗೆ ಇನ್ನೂ ನಿನ್ನ ಜೊತೆ ಸಮಯ ಕಳಿಬೇಕು ಅನ್ನೋ ಬಯಕೆ.. ಯಾಕಂದ್ರೆ, 'ನೀನು' ದೇವರಲ್ಲಿ ನಾನೂ ಕೇಳ್ಕೊಂಡಿರೋ ಹರಕೆ..! ಜೀವನಪೂರ್ತಿ ಕಳೀಬೇಕು ನಿನ್ನಜೊತೆ ಅನ್ನೋ ಆಸೆ ಕನಸು ಇನ್ನೂ ಹೆಚ್ಚಾಗ್ತಾ ಹೋಯ್ತು.. ಹಾಗೇ ನಿನ್ನ ಮೇಲಿನ ಪ್ರೀತಿ ಕೂಡ ಹೆಚ್ಚಾಗ್ತಾ ಹೋಯ್ತು..
ಇನ್ನೇನು ನನ್ನ ಪ್ರೀತಿ ಹೇಳ್ಕೊಂಡುಬಿಡ್ಬೇಕು ಅನ್ನೋಷ್ಟ್ರಲ್ಲಿ ನೀನೇ ನನ್ನ ದೂರ ಇಡೋಕೆ ಶುರುಮಾಡಿಯೇ ಬಿಟ್ಟೆ.. ಜಾಸ್ತಿ ಮಾತಾಡಿದರೆ ಅಭ್ಯಾಸ ಆಗಬಹುದು, ಯಾವ್ದು ಅತೀ ಆಗ್ಬಾರ್ದು, ದೂರ ಇರೋದು ಒಳ್ಳೇದು ಅಂತ ಕಾರಣಗಳನ್ನು ಕೊಟ್ಟೆ..!! ಮಾತಿನಲ್ಲಿ ಮುಗಿದರೂ ಮನಸಲ್ಲಿ ಮುಗಿಯದ ಪ್ರೀತಿ💔
ನೀನೇಷ್ಟೇ ದೂರ ತಳ್ಳಿದರೂ ಇನ್ನೂ ಹತ್ತಿರವಾಗುತಿತ್ತು ಮನಸು.. ನಿನಗೆ ಸಾಕಾಗಿತ್ತೇನೋ ನನ್ನ ಕಾಟ, ಅಂತೂ ಕೊನೆಗೆ ನನ್ನನ್ನೇ ಬ್ಲಾಕ್ ಮಾಡಿ ಹೇಳಿಬಿಟ್ಟಿದ್ದಿ ನೀ ಟಾಟ..! ಎಷ್ಟಿದ್ದರೂ ಮೊದಲ ಪ್ರೀತಿ.. ನಿನಗಾಗಿ ಕಾದಿದ್ದೇ ಎಷ್ಟೋ ವರ್ಷಗಳಿಂದ..! ಅಯ್ಯೋ.. ಯಾರನ್ನಾದರೂ ಇಷ್ಟ ಪಡ್ತಿರ್ಬೇಕು ಅನ್ನೋ ಯೋಚನೆ, ಆ ಯೋಚನೇಲಿ ನಿನ್ನನ್ನ ಕಳ್ಕೊಂಡೆ ಅನ್ನೋ ಸೂಚನೆ.. ಆ ದಿನ ಅಷ್ಟಿಷ್ಟಲ್ಲ ವದ್ದಾಡಿದ್ದು ಈ ಹೃದಯ..! ನಿನಗಾಗಿ ಕಾದಿದ್ದಕ್ಕಿಂತ, ಇದೇ ನೋವು ತುಂಬಾ ಭಾರವಾಗಿತ್ತು..! ಏನೇ notification ಬಂದರೂ ನೀನೇ ಎನ್ನುವ ಕುತೂಹಲ .. ಅಲ್ಲಿ ನೀನಿಲ್ಲದಾಗ ಇನ್ನೂ ನೋವಿನ ಗೊಂದಲ.. ಯಾರಿಗೂ ಸೋಲದ ಈ ನನ್ನ ಹೃದಯ ಇಂದು ಎಷ್ಟೇ ಕಷ್ಟವಾದರೂ ಕಣ್ಣೀರೇ ಬಾರದ ಕಗ್ಗಲ್ಲು ಆಗಿದ್ದಂತೂ ಸತ್ಯ..! ಆ ಕೃಷ್ಣನಲ್ಲಿ ಮುಡಿಪಿಟ್ಟು ಕೇಳಿದ್ದೋಂದೆ.. "ಎಂದಿಗೆ ಈ ಬ್ಲಾಕ್ ಮಾಡೋದು ಮುಕ್ತಾಯ? ಹಾಗೇ ಎಂದಿಗೆ ಶುರುವಾಗೋದು ನಮ್ಮ ಪ್ರೀತಿಯ ಅಧ್ಯಾಯ??" ಅಸ್ತು ಎಂದನೇನೋ ಕೃಷ್ಣ.. Unblock ಆಗಿದ್ದಂತೂ ಇಂದಿಗೂ ಆಶ್ಚರ್ಯ..! ಎಷ್ಟು ಭಾವನೆಗಳನ್ನ ಹಿಡಿದಿಟ್ಟಿದ್ದೆ ಎಂದರೆ, ಅವನ ರಿಪ್ಲೈಗೆ ಕಾಯುವಷ್ಟು ತಾಳ್ಮೆ ಇರಲಿಲ್ಲ.. ನನ್ನ ಅಷ್ಟು ದಿನದ ತಾಳ್ಮೆ ಕೋಪವಾಗಿ ಬಂದಿದ್ದು, ನಾನು ನಿನ್ನನ್ನು ಬೈದಿದ್ದು ಜೋರು ಮಾಡಿ ಮಾತಾಡಿದ್ದು ನನಗರಿವಿಲ್ಲದೆ ಆಗಿದ್ದು ಅದೆಲ್ಲ.. ಅದೆಲ್ಲರ ಹಿಂದಿದ್ದದ್ದು ಮಾತ್ರ ನಿನ್ನಮೇಲಿನ ಪ್ರೀತಿ.. ಆದರೆ ಆ ನನ್ನ ವರ್ತನೆ ಯಿಂದ ನಿನಗೆ ನೋವಾಗುವುದು ಎಂಬ ಕಲ್ಪನೆಯು ಇರಲಿಲ್ಲ.. ಇದೆಲ್ಲವೂ ಇಲ್ಲಿಗೆ ನಿಲ್ಲಿಸಿದರೆ ಚಂದ ಎನ್ನುವ ಮಾತು ನಿನ್ನಿಂದ ಬರುವುದೆಂಬ ಆಲೋಚನೆಯು ಇರಲಿಲ್ಲ.. ಅಲ್ಲಿಗೆ ಅರ್ಥವಾಗಿದ್ದಿಷ್ಟೇ.. ನಿನಗೆ ನನ್ನ ಮೇಲೆ ಕಿಂಚಿತ್ತೂ ಪ್ರೀತಿಯೂ ಇಲ್ಲವೆಂದು. ನಾನೇ ಇಲ್ಲಿ ಹುಚ್ಚರಂತೆ ಹುಚ್ಚಾಗಿದ್ದು ಎಂದು..!! ಇಲ್ಲಿಗೆ ಮುಕ್ತಾಯವಾದರೂ ಸರಿ ಇಷ್ಟುದಿನದ ಪ್ರೀತಿಯ ನಿನಗೆ ತಿಳಿಸಿಯೇ ಹೋಗಬೇಕೇನಿಸಿದ್ದು ಯಾಕೋ ನನಗೆ ಗೊತ್ತೇ ಆಗದ ಸಂಗತಿ..! ನನ್ನ ಪ್ರೀತಿ ಶುರುವಾಗಿದ್ದನಿಂದ ಇಂದು ಕೊನೆಯಾಗಿದ್ದರವರೆಗೆ ಎಲ್ಲವ ಎಳೆ ಎಳೆಯಾಗಿ ಬಿಚ್ಚಿಟ್ಟೆ. 
" ನೀ ನನ್ನ ಮೊದಲ ಪ್ರೀತಿ 
ನಿನಗಾಗಿ ಕಾದಿದ್ದೆ, ನಿನಗಾಗಿ ದೇವರ ಬೇಡಿದ್ದೇ 
ನೀನೇ ಜೀವನದ ಸಂಗಾತಿ ಎಂದುಕೊಂಡಿದ್ದೆ.
ಕ್ಷಣ ಕ್ಷಣ ವದ್ದಾಡಿದ್ದೇ.. ನಿನ್ನ ನಂಬರ್ ಗಾಗಿ ಬಡಿದಾಡಿದ್ದೇ .. ನಿನ್ನ ಮೇಲೆ ಜೀವವಿಟ್ಟು ಕುಳಿತದ್ದೇ , ಇಂದಿಗೂ ನಿನ್ನನ್ನೇ ಪ್ರೀತಿಸಿದ್ದೇ,ಪ್ರೀತಿಸ್ತೀದ್ದೆ..! ಎಲ್ಲವ ಹೇಳಿದ ನನಗೆ ಮನಸು ಹಗುರ ಆಗಿದ್ದು ಸತ್ಯ.. ಆದರೆ ವಿಧಿ ಲಿಖಿತ..!?? ಬೇರೆಯೇ ಆಗಿತ್ತು..!! "ನೀ ನನ್ನ ಪ್ರೀತಿಸ್ತೀದಿಯ, ಆದ್ರೆ ನಾನಲ್ಲ..! ನನಗೆ ಆ ತರಹದ ಭಾವನೆಗಳೇ ಇಲ್ಲ.. ನನ್ನ ಮನೆಯ ಜವಾಬ್ದಾರಿಗಳೇ ನನಗೆಲ್ಲ.."!
ನಿನ್ನ ಮೇಲಿರುವುದು ಇಂದಿಗೂ ಎಂದಿಗೂ ಸ್ನೇಹ ಮಾತ್ರ.. ಪ್ರೀತಿ ಎಂದುಕೊಂಡರೆ ನನಗೆ ಬಿಟ್ಟಿದ್ದಲ್ಲ ಎಂಬ ನಿನ್ನ ಮಾತುಗಳಿಗೆ ಕಣ್ಣಿಂದ ಹನಿ ಜಾರಿದ್ದು ಗೊತ್ತಾಗಲಿಲ್ಲ..!! ಅಂದು ನಾ ನಿನಗಾಗಿ ಹಾಕಿದ ಕಣ್ಣೀರು ಅದಾಗಿತ್ತು..!! ಒತ್ತಾಯದಿಂದ ಸ್ನೇಹವಾಗಬಹುದು. ಪ್ರೀತಿಯಲ್ಲ..!! ನಿನ್ನ ಮನಸಲ್ಲಿ ನಾನು ಇಲ್ಲದಿದ್ದರೆ ಏನಂತೆ , ನನಗೆ ಕೊನೆವರೆಗೂ ನಿನ್ನ ನೆನಪುಗಳೇ ಸಾಕಂತೆ,!
ನಿನಗಾಗಿ ಕಾಯುವೆ ಕೊನೆವರೆಗೂ, ಸಿಕ್ಕರೆ ಅದೃಷ್ಟ ಸಿಗದಿದ್ದರೆ ವಿಧಿಯಾಟ ..! ಇಂದಿಗೂ ಎಂದಿಗೂ ನನ್ನ ಪ್ರೀತಿ ನೀನೇ.. ನನ್ನ ಪ್ರೀತಿ ನೀನೇ 💞



ಇಂತಿ ನಿನ್ನ irritation 
__💌💞

Post a Comment

0 Comments