ಪ್ರೀತಿ ಒಂದಿದ್ದರೆ ಸಾಕಾಗತ್ತಾ?
ಜೀವನಪೂರ್ತಿ ಬಾಳ್ವೆಗೆ ಸಾಕ್ಷಿಯಾಗಿರೋ
ಪ್ರೀತಿಗೆ, ಬರೀ ಕಣ್ಣೋಟ ಸಾಕಾಗಿತ್ತಾ.?
ಜೀವನಕ್ಕೆ ಬೇಕಿರೋ ನಿರ್ಧಾರಗಳಿಗೆ
ಬರೀ ಆಣೆ, ಪ್ರಮಾಣ ಬೇಕಿತ್ತಾ.?
ಪ್ರೀತಿಲಿ ಎಷ್ಟೇ ಪಜೀತಿ ಬಂದ್ರೂ, ಹೆದರಬೇಡ
ಅಂದಿರೋ ನಿನಗೆ ಕೊನೆಗೆ ಜಾತಿ
ಮುಖ್ಯ ಆಗಿತ್ತಾ?
ಪ್ರೀತಿಗೆ ಜಾತಿನೇ ಮುಖ್ಯ ಅನ್ನೋ ನಿನಗೆ
ಪ್ರೀತಿಗೂ ಮುಂಚೆ ಜಾತಿ ಮರ್ತೆ ಹೋಗಿತ್ತಾ?
ಜಾತಿ ಜಾತಿ ಅಂತೀರೋ ನಿನಗೆ
ನನ್ನಷ್ಟು ಪ್ರೀತ್ಸೋ ಪ್ರೀತಿ ಸಿಗತ್ತಾ.!?
ನಿನ್ನನ್ನ, ನಿನ್ನ ನಾಟಕದ ಪ್ರೀತಿನಾ
ಮರೆತು ಬದುಕೋಕೆ ನನಗಾಗತ್ತಾ.?
ಈ ನಿನ್ನ ಮೋಸವೆಲ್ಲ, ಪೀತಿನೇ ಅಂತ
ನಿನಗೆ ಅನ್ಸತ್ತಾ.?
ಹೇಳು ನಿನಗೆ ಅನ್ಸತ್ತಾ..?
ಹೇಳು ನಿನಗೆ ಅನ್ಸತ್ತಾ..!?
Lines by --- shivaganga
0 Comments