ಟಾಸ್ಕ್ ಹಾಗೂ ಮನರಂಜನೆಯಲ್ಲಿ ಎತ್ತಿದ ಕೈ ಇರುವ ರಜತ್ ಅವರಿಗೆ ಮುಂಗೋಪ ಜಾಸ್ತಿ. ಅದೇ ಮುಂಗೋಪದ ಕಾರಣ ಇಂದು ಬಿಗ್ ಬಾಸ್ ಮನೆಯಲ್ಲಿ ಸಹ ಸ್ಪರ್ಧಿ ಧನರಾಜ್ ಅವರೊಂದಿಗೆ ಜಗಳ ಆಗಿದೆ.
ಆಟಗಳ ಮಧ್ಯೆ ನಾಮಿನೆಷನ್ ಮಾಡುವ ಪ್ರಕ್ರಿಯೆಯಲ್ಲಿ ಧನರಾಜ್ ರಜತ್ ಅವರ ಮೇಲೆ ಕೊಟ್ಟ ಕಾರಣಗಳು ರಜತ್ ಅವರಿಗೆ ಇಷ್ಟವಾಗುವುದಿಲ್ಲ. ಪ್ರತಿಯಾಗಿ ಧನರಾಜ್ ಒಟ್ಟಿಗೆ ರಜತ್ ಅವರು ವಾದಿಸುತ್ತಾರೆ, ಆದರೆ ಧನರಾಜ್ ತಾವು ಕೊಟ್ಟ ಕಾರಣಗಳೇ ಸರಿ ಎಂದು ವಾದಿಸುತ್ತಾರೆ. ಸಿಟ್ಟಲ್ಲಿದ್ದ ರಜತ್ 'ಇವೆಲ್ಲ ಚಿಕ್ಕ ಕಾರಣಗಳು, ಮಗು ತರ ಆಡ್ಬೇಡ' ಅಂತ ಹೇಳ್ತಾನೆ. ಅಯ್ಯೋ ನಾನು ಮಗು ನೀವು ಅಂಕಲ್ ಅಂತ ಹೇಳಿ ಧನರಾಜ್ ರಜತ್ ಕೆನ್ನೆ ಮೇಲೆ ಹೊಡೆದು ಮಾತಾಡಿಸುತ್ತಾರೆ. ಇದಕ್ಕೆ ಇನ್ನೂ ಹೆಚ್ಚು ಕೋಪಗೊಂಡ ರಜತ್ ಧನರಾಜ್ ಮೈಮೇಲೆ ಹೋಗುತ್ತಾರೆ. ಅದೇ ಸಮಯದಲ್ಲಿ ಗೌತಮಿ ಹಾಗೂ ಮನೆಯವರು ಜಗಳ ಬಿಡಿಸಿ ಕಳಿಸುತ್ತಾರೆ.
ನಂತರ, ಕಳಪೆ ಕೊಡುವ ಸಮಯದಲ್ಲಿ ರಜತ್ ಹೆಸರು ತೆಗೆದುಕೊಳ್ಳುತ್ತಾನೆ ಧನರಾಜ್. ಮೊದಲೇ ಸಿಟ್ಟಲ್ಲಿದ್ದ ರಜತ್ 'ನೋಡ್ಕೊಂಡು ರೀಸನ್ ಕೊಡು, ಇಲ್ಲಾಂದ್ರೆ ನಾನು ಸರಿ ಇಲ್ಲ. ಮುಖ ಚಚ್ಚಿಬಿಡ್ತೀನಿ ಅಂತ ಹೇಳ್ತಾರೆ'. ಹೇಳಿದ ಹಾಗೇ ಮಾಡ್ತೀರಾ ಮಾಡಿ ಮಾಡಿ ಎಂದು ಟ್ರಿಗ್ಗರ್ ಮಾಡಿದ ಧನರಾಜ್ ಮೈ ಮೇಲೆ ಹಾರಿ ಕೈ ಮಾಡಲು ಮುಂದಾಗುತ್ತಾರೆ ರಜತ್.
ಕೋಪ ಕೆಟ್ಟದ್ದಲ್ಲ ; ಕೋಪದ ಕೈಗೆ ಬುದ್ಧಿ ಕೊಡುವುದು ತಪ್ಪು
0 Comments