ರೇಣುಕಾಸ್ವಾಮಿ ಕೊಲೆ ಕೇಸ್ ಮೇಲೆ ಜೈಲು ಸೇರಿದ್ದ ದರ್ಶನ್ ಅವರಿಗೆ ಅನಾರೋಗ್ಯದ ಕಾರಣ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡಿದ್ದರು. ಹೊರಗೆ ಬಂದ ದರ್ಶನ್ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಸಹ ಜಾಮೀನು ನೀಡಲಾಗಿದೆ.
ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರವಿಲ್ಲ ಎಂದು ಲಾಯರ್ ಸಿವಿ ನಾಗೇಶ್ ಅವರು ದರ್ಶನ್ ಪಾರ ವಾದ ಮಾಡಿದ್ದರು. ಪೊಲೀಸರೇ ಕೆಲವೊಂದು ದರ್ಶನ್ ವಿರುದ್ಧ ಉತ್ಪ್ರೇಕ್ಷಿತ ಆರೋಪ ಮಾಡಿದ್ದರೆಂದು ವಾದಿಸಿದ್ದರು.
ದರ್ಶನ್ ಪರ ವಾದಿಸಿದ ಸಿವಿ ನಾಗೇಶ್ ಅವರ ವಾದವನ್ನು ವಿಚಾರಿಸಿದ ಕೋರ್ಟ್ ನ್ಯಾಯಾಧೀಶರಾದ ವಿಶ್ವಜೀತ್ ಶೆಟ್ಟಿ ಅವರು ಇಂದು ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನಿತರರಿಗೆ ಜಾಮೀನು ನೀಡಲಾಗಿದೆ.
0 Comments