ಪ್ರೀತಿಸಿದವರಿಗೆ ನೋವು ತಪ್ಪಿದ್ದಲ್ಲ..!!

ನೀನು ನನ್ನ ಬಿಟ್ಟು ಬೇರೆಯವರೊಟ್ಟಿಗೆ ಹೋಗಿದ್ದು ತಪ್ಪಲ್ಲ..!
ಆದ್ರೆ, ನಿನ್ನ ನೆನಪುಗಳನ್ನು ನನ್ನಲ್ಲಿಯೇ ಬಿಟ್ಟೋಗಿದ್ದು ತಪ್ಪು..!

ನೀನು ವರ್ಷಗಳ ಕಾಲ ಪ್ರೀತ್ಸಿ ಬಿಟ್ಟೋಗಿದ್ದು ತಪ್ಪಲ್ಲ..!
ವರ್ಷಗಳ ಪ್ರೀತಿಯನ್ನು ಕೆಲವೇ ದಿನಗಳಲ್ಲಿ ಮರೆತಿರೋದು ತಪ್ಪು..!

ನೀನು ಈ ಕಣ್ಣೀರ ನೋವು ಕೊಟ್ಟಿದ್ದು ತಪ್ಪಲ್ಲ..!
ಆದ್ರೆ, ಈ ಪ್ರತಿ ಕಣ್ಣೀರಹಣಿ ನಿನ್ನ ಹೆಸರ ಹೇಳ್ತಿರೋದು ತಪ್ಪು..!

ನೀನು ನನ್ನ ತಿರಸ್ಕರಿದ್ದು ತಪ್ಪಲ್ಲ..!
ಕಾರಣವೇ ಇಲ್ಲದ ಆ ತಿರಸ್ಕಾರ ತಪ್ಪು..!

ನೀನು ನನ್ನ ಮರೆಯುವುದು ತಪ್ಪಲ್ಲ..!
ನಿನ್ನ ಮರೆಯದ ಹಾಗೇ ಹಚ್ಚಿಕೊಂಡ ನನ್ನ ಮನಸ್ಸಿನ ತಪ್ಪು..!

ನೀನು ನನಗೆ ಮೋಸ ಮಾಡಿದ್ದು ತಪ್ಪಲ್ಲ..!
ನನ್ನ ಪ್ರೀತಿ ಅರಿಯದೆ ಸರ್ವನಾಶ ಮಾಡಿದ್ದು ತಪ್ಪು..!

ಮೋಸವೂ ತಪ್ಪು ಅಲ್ಲ.. 
ಪ್ರೀತಿಯೂ ತಪ್ಪು ಅಲ್ಲ..

ಪ್ರೀತಿಸಿದವರಿಗೆ ನೋವು ತಪ್ಪಿದ್ದಲ್ಲ..!
ಪ್ರೀತಿಸಿದವರಿಗೆ ನೋವು ತಪ್ಪಿದಲ್ಲಿ..!

Comment your opinion. Thank you❤️

Post a Comment

0 Comments