ಕಿಚ್ಚ ಸುದೀಪ್ ತಾಯಿ ಸರೋಜ ಸಂಜೀವ ವಿಧಿವಶ || ನೋವಿನಲ್ಲಿ ಸುದೀಪ್ ಕುಟುಂಬ || Kichcha Sudeep's mother, Saroja Sanjeev, passes away || Sudeep's family in grief.

ಪ್ರತಿಷ್ಠಿತ ನಟ ನಮ್ಮ ಹೆಮ್ಮೆಯ ಕನ್ನಡಿಗ ಕಿರುತರೆ ಕಾರ್ಯಕ್ರಮಗಳ ನಿರೂಪಕರಾದ ನಮ್ಮ ಪ್ರೀತಿಯ ಸುದೀಪ್ ಅವರ ತಾಯಿ ಸರೋಜ ಸಂಜೀವ ಅವರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರು ಚಿಕಿತ್ಸೆ ಫಲಿಸದೇ ಅಕ್ಟೋಬರ್ 20 2024, ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಬಿಟ್ಟಿದ್ದಾರೆ.

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬೆಳಿಗ್ಗೆ ಸುಮಾರು 7 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇದೀಗ ಸುದೀಪ್ ಕುಟುಂಬ ನೋವಿನ ಮಡುವಿನಲ್ಲಿದೆ. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಸುದೀಪ್ ಹಾಗೂ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಆ ಶಕ್ತಿಯನ್ನು ಭಗವಂತ ನೀಡಲಿ.

Post a Comment

0 Comments