ಕುಟುಂಬದಲ್ಲಿ ಸುಖ ಶಾಂತಿ ಇರಲು ಏನು ಮಾಡಬೇಕು?

 ಕುಟುಂಬವು ನಮ್ಮ ಜೀವನದ ಆಧಾರ ಸ್ಥಂಭ. ಕುಟುಂಬದಲ್ಲಿರುವ ಪ್ರೀತಿ, ವಿಶ್ವಾಸ, ಕರ್ತವ್ಯ, ಒಗ್ಗಟ್ಟು ನಮ್ಮ ಜೀವನಕ್ಕೆ ಶಕ್ತಿ ನೀಡುತ್ತವೆ. ಆದರೆ, ಕೆಲವೊಮ್ಮೆ ಅಸಮಾಧಾನ ಮತ್ತು ಕಲಹಗಳು ಕುಟುಂಬದ ಸುಖ ಶಾಂತಿಗೆ ಧಕ್ಕೆ ತರಬಹುದು. ಸುಖಮಯ ಹಾಗೂ ಶಾಂತಿ ಪೂರ್ಣ ಕುಟುಂಬ ಜೀವನವನ್ನು ಸಾಧಿಸಲು ಹಾಗೂ ಸಾಗಿಸಲು ಕೆಳಗಿನ ಸಲಹೆಗಳು ಸಹಾಯಕವಾಗಬಹುದು.

1)ಸಂವಹನ ಪ್ರಾಮುಖ್ಯತೆ
ಕುಟುಂಬದವರೊಂದಿಗೆ ನೇರ, ಸ್ಪಷ್ಟ, ಸತ್ಯ ಮತ್ತು ಪ್ರಾಮಾಣಿಕವಾಗಿ ಸಂವಹನ ನಡೆಸಿ. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಎಲ್ಲರ ಮಾತನ್ನು ಆಲಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಹೆಚ್ಚಾನೆಚ್ಚು ಸಮಸ್ಯೆಗಳು ಸಂವಹನದ ಕೊರತೆಯಿಂದಲೇ ಉಂಟಾಗುವುದು. ದಿನವೂ ಒಂದೇ ಸಮಯದಲ್ಲಿ ಎಲ್ಲರೂ ಊಟ ಮಾಡಿದ ನಂತರ, ಸಂವಹನ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುವುದು ಅವಶ್ಯಕ.ಕುಟುಂಬದಲ್ಲಿ ಸುಖ ಶಾಂತಿ ಇರಲು ಏನು ಮಾಡಬೇಕು?*
2)ಪರಸ್ಪರ ಗೌರವ
 ಪ್ರತಿಸ್ಪರ್ಧಿ ಮನೋಭಾವವು ಸಾಮಾನ್ಯವಾಗಿ ಕಲಹಗಳಿಗೆ ಕಾರಣವಾಗುತ್ತವೆ. ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಗೌರವದಿಂದ ಇರಬೇಕು. ಪ್ರತಿ ವ್ಯಕ್ತಿಯ ಭಾವನೆ, ಆಲೋಚನೆ ಮತ್ತು ಅಭಿಪ್ರಾಯಗಳಿಗೆ ಗೌರವಿಸಬೇಕು. ಯಾವಾಗಲೂ ಸಹನಾಭೂತಿ ಆಗಿರಬೇಕು.
3) ಸಮಯದ ಹೂಡಿಕೆ
 ಕುಟುಂಬದವರೊಂದಿಗೆ ಒಟ್ಟಿಗೆ ಸಮಯ ಕಳೆಯುವುದು ಬಹಳ ಮುಖ್ಯ. ವೈಯಕ್ತಿಕ ಜೀವನದ ಜವಾಬ್ದಾರಿಗಳಿಂದ ಎಲ್ಲರೂ ಒಂದೊಂದು ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ತಮ್ಮ ಕೆಲಸದ ನಂತರ ಕುಟುಂಬದವರೊಡನೆ ಪಿಕ್ನಿಕ್, ಆಟಗಳು, ಸಿನಿಮಾವೀಕ್ಷಣೆ ಮಾಡಬೇಕು. ಇವುಗಳು ನಮ್ಮ ಕುಟುಂಬದ ಭಾಂದವ್ಯವನ್ನು ಸುಧಾರಿಸುತ್ತವೆ.

4)ಸಹಾನುಭೂತಿ & ಸಹಾಯ
 ಸಹಾನುಭೂತಿ ಮತ್ತು ಪರಸ್ಪರ ಸಹಾಯದಿಂದ ಕುಟುಂಬದಲ್ಲಿ ಬಾಂಧವ್ಯ ಬಲಗೊಳ್ಳುತ್ತದೆ. ಪ್ರತಿಯೊಬ್ಬರು ಒಬ್ಬರ ಮೇಲೊಬ್ಬರು ಅವಲಂಬಿತರಾಗಿರುತ್ತಾರೆ. ಒಬ್ಬರಿಗೆ ಸಮಸ್ಯೆ ಇದ್ದಾಗ, ಇನ್ನೊಬ್ಬರು ಸಹಾಯ ಮಾಡಬೇಕು. ಇದು ಕುಟುಂಬದ ಒಗ್ಗಟ್ಟನ್ನು ಹೆಚ್ಚಿಸುತ್ತದೆ.

6)ಹಬ್ಬ ಆಚರಣೆಗಳು
ಕುಟುಂಬದ ಸಂಸ್ಕೃತಿಯನ್ನು ಹಾಗೂ ಪರಂಪರಾಗತವಾಗಿ ಬಂದಿರುವ ಆಚರಣೆಗಳನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಬ್ಬಗಳನ್ನು ಕುಟುಂಬದವರೊಂದಿಗೆ ಆಚರಿಸುವುದು ಒಂದು ಸೌಭಾಗ್ಯ. ಎಲ್ಲರೂ ಒಂದಾಗಿ, ಖುಷಿಯಿಂದ ಹಬ್ಬವನ್ನು ಆಚರಿಸಿ ಸಂಭ್ರಮವನ್ನು ಹಂಚಿಕೊಳ್ಳುವುದರಿಂದ ಒಗ್ಗಟ್ಟು ಹೆಚ್ಚುತ್ತದೆ.
7)ಆರೋಗ್ಯಕರ ಜೀವನಶೈಲಿ
ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ವಿಶ್ರಾಂತಿ ಕುಟುಂಬದ ಎಲ್ಲಾ ಸದಸ್ಯರ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಸ್ಥಿತಿಗೆ ಮುಖ್ಯವಾಗುತ್ತದೆ. ಈ ರೂಢಿಗಳನ್ನು ರೂಢಿಸಿಕೊಳ್ಳುವುದರಿಂದ ಆರೋಗ್ಯಕರ ಕುಟುಂಬವನ್ನು ರೂಪಿಸಬಹುದು.

8)ಆರ್ಥಿಕ ಪರಿಸ್ಥಿತಿ
 ಆರ್ಥಿಕ ಕಲಹಗಳು ಕುಟುಂಬದಲ್ಲಿ ತುಂಬಾ ಸಾಮಾನ್ಯ. ಹಣಕಾಸಿನ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಸರಿಯಾದ ಹಣಕಾಸು ನಿರ್ವಹಣೆಯಿಂದ ಕುಟುಂಬದಲ್ಲಿ ಶಾಂತಿ ಮತ್ತು ಸಮಾಧಾನ ಸಾಧಿಸಬಹುದು.
9)ಆತ್ಮಸಮನ್ವಯ & ಧ್ಯಾನ
ಆತ್ಮಸಮನ್ವಯ ಮತ್ತು ಧ್ಯಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಪ್ರಶಾಂತವಾಗಿರುತ್ತದೆ. ಇದು ಕುಟುಂಬದ ಶಾಂತಿಗೆ ಸಹಕಾರಿಯಾಗುತ್ತದೆ. ಕುಟುಂಬದವರೊಂದಿಗೆ ಧ್ಯಾನ ಮಾಡುವುದರಿಂದ ಆಧ್ಯಾತ್ಮಿಕ ಬಾಂಧವ್ಯವೂ ಕೂಡ ಹೆಚ್ಚುತ್ತದೆ.

10)ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸು
ಸಮಸ್ಯೆಗಳೇ ಇಲ್ಲದ ಕುಟುಂಬವಿಲ್ಲ. ಆದರೆ, ಅವುಗಳನ್ನು ಹೇಗೆ ನಿಭಾಯಿಸುವುದು ಎಂಬುದು ಪ್ರತಿ ಸದಸ್ಯರ ಹೊಣೆ. ನಾನು ಸರಿ ನೀನು ತಪ್ಪು ಎಂಬ ಧೂಷಣೆಯಿಂದ ಕಲಹಗಳು ಹೆಚ್ಚುತ್ತವೆ. ಕಲಹಗಳನ್ನು ಶಾಂತವಾಗಿ ವಿಚಾರಿಸಿ ಸರಿಯಾದ ರೀತಿಯಲ್ಲಿ ಪರಿಹರಿಸಬೇಕು.

ಇವುಗಳನ್ನು ಅನುಸರಿಸುವ ಮೂಲಕ ನಮ್ಮ ಕುಟುಂಬದಲ್ಲಿ ಸುಖ ಹಾಗೂ ಶಾಂತಿಯನ್ನು ಸಾಧಿಸಬಹುದು. ಕುಟುಂಬವನ್ನು ಎಲ್ಲರೂ ಸಂತೋಷ, ಸಂತೃಪ್ತಿಯಿಂದ ನಿರ್ವಹಿಸಬೇಕು. ಕುಟುಂಬ ಎನ್ನುವುದು ಬರಿ ಜನರ ಗುಂಪು ಅಲ್ಲ, ಪ್ರೀತಿ ಮತ್ತು ಗೌರವದಿಂದ ಕೂಡಿದ ಒಂದು ದೇಗುಲವಾಗಬೇಕು.

Post a Comment

0 Comments