1.ಸಮತೋಲನವಾದ ಆಹಾರ ಸೇವನೆ: ಕಡಿಮೆ ಕಬ್ಬಿಣಂಶ ಪಧಾರ್ಥಗಳು, ಒಗ್ಗರಣೆ, ಉಪ್ಪು ಮತ್ತು ಸಕ್ಕರೆಯ ಆಹಾರಗಳನ್ನು ಕಡಿಮೆ ಮಾಡಿ. ಹಣ್ಣು, ತರಕಾರಿಗಳು, ಧಾನ್ಯಗಳು, ಮತ್ತು ಪ್ರೋಟೀನ್ ಯುಕ್ತ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.
2.ನೀರನ್ನು ಸಾಕಷ್ಟು ಕುಡಿಯಿರಿ: ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯುವುದರಿಂದ ಶರೀರದ ವಿಷಕಾರಕಗಳನ್ನು ಹೊರಹಾಕಿ, ದೇಹದ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ದೇಹವು ತಾಜಾವಾಗಿ ಇರುತ್ತದೆ.
3. ಪ್ರತಿದಿನ ವ್ಯಾಯಾಮ: ದಿನಕ್ಕೆ ಸರಾಸರಿ 30 ನಿಮಿಷ ವ್ಯಾಯಾಮ ಮಾಡುವುದರಿಂದ ದೇಹದ ಕ್ಯಾಲೋರಿ ಹೆಚ್ಚಿಸಬಹುದು. ಓಟ, ಯೋಗ, ನಡಿಗೆ, ಸೈಕ್ಲಿಂಗ್, ಅಥವಾ ನೃತ್ಯ ಮಾಡುವುದರಿಂದ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬಹುದು. ತೂಕವನ್ನು ನಿಯಂತ್ರಿಸಬಹುದು.
4. ಯೋಗ್ಯ ನಿದ್ರೆ: ಪ್ರತಿ ರಾತ್ರಿ ಕನಿಷ್ಠ 7-8 ಗಂಟೆಗಳ ನಿದ್ರೆ ಅಗತ್ಯ. ಕಡಿಮೆ ನಿದ್ರೆ ದೇಹದ ಹಾರ್ಮೋನ್ ಬದಲಾವಣೆಗಳಿಗೆ ಕಾರಣವಾಗಿ ತೂಕ ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅರೋಗ್ಯಕರವಾದ ನಿದ್ದೆ ಅರೋಗ್ಯವಂತ ಮನುಷ್ಯನಾಗುವುದುಕ್ಕೆ ದಾರಿ.
5. ಆಹಾರ ಸೇವನೆಗೆ ನಿಯಂತ್ರಣ: ಊಟವನ್ನು ಹೆಚ್ಚು ಬಾರಿ ಹಾಗೂ ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ, ದೇಹದ ಮೆಟಾಬೊಲಿಸಮ್ (ಚಯಾಪಚಯ ಕ್ರಿಯೆ) ಸುಧಾರಿಸುತ್ತದೆ. ದಿನವೂ ಸರಿಯಾದ ಸಮಯಕ್ಕೆ ಊಟ ಮಾಡಿ, ಅನಿಯಿಮತ ಊಟದ ಸಮಯ ತೂಕದ ಹೆಚ್ಚಳಕ್ಕೆ ಕಾರಣವಾಗಬಹುದು. ಅರೋಗ್ಯವು ಸಹ ಕೆಡುವ ಸಂಭವವಿರುತ್ತದೆ.ತೂಕ ಕಡಿಮೆ ಮಾಡಲು ಕೆಲವು ನೈಸರ್ಗಿಕ ಉಪಾಯಗಳು:
6. ಆಹಾರದ ಮೊತ್ತದಲ್ಲಿ ಕಠಿಣ ನಿಯಮ: ತಿನ್ನುವ ಮೊದಲು ಪ್ರಮಾಣವನ್ನು ನಿಗದಿಪಡಿಸಿ, ಅತಿಯಾಗಿ ತಿನ್ನುವುದನ್ನು ತಡೆಯಿರಿ. ಅತಿಯಾದ ಎಣ್ಣೆ ಪದಾರ್ಥಗಳನ್ನು, ಜಂಕ್ ಫುಡ್ ಗಳನ್ನು ತಿನ್ನುವುದನ್ನು ನಿಲ್ಲಿಸಿ.
ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯವಾಗುತ್ತದೆ.
0 Comments