ಪ್ರೀತಿ ಬಂಧ: ಹರೆಯದರಲ್ಲಿ ಎರಡು ಹೃದಯಗಳ ಸಮ್ಮಿಲನವಾಗುವುದು ಪ್ರೀತಿ. ಪ್ರೀತಿ ಶಾಶ್ವತವೂ ಹೌದು, ಅಶಾಶ್ವತವೂ ಹೌದು. ವರುಷಗಟ್ಟಲೆ ಪ್ರೀತಿ ಮಾಡಿ ತಮ್ಮ ವೈಯಕ್ತಿಕ ಕಾರಣದಿಂದ ದೂರಾದವರು ಇದ್ದಾರೆ. ಪ್ರೀತಿಯೇ ನನ್ನುಸಿರು ಎಂದು ಪ್ರೀತಿಸಿದವರನ್ನೇ ಮದುವೆಯಾಗಿ ಜೀವನ ಸಾಗಿಸದವರು ಇದ್ದಾರೆ.
ಪ್ರೀತಿಯೇ ಆಗಲಿ, ಸ್ನೇಹವೇ ಆಗಲಿ ವ್ಯಕ್ತಿಗಳ ಮನಸ್ಥಿತಿಯ ಮೇಲೆ ಹಾಗೂ ಮನೆಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಸ್ನೇಹ ಪ್ರೀತಿ ಎರಡರ ನಡುವೆಯೂ ಇರುವ ವ್ಯತ್ಯಾಸವಾದರೂ ಏನು? ಇಲ್ಲಿವೆ ಕೆಲವು ಅಂಶಗಳು
1)ಭಾವನಾತ್ಮಕ ಸಂಬಂಧ
ಸ್ನೇಹ ಸಂಬಂಧದಲ್ಲಿ ತುಂಬಾ ಸಹನಾಭೂತಿ, ಬೆಂಬಲ, ಪ್ರೀತಿ ಇರಬೇಕು. ಆದರೆ, ಸಣ್ಣ ಪುಟ್ಟ ಜಗಳವಾದಾಗ ಅರ್ಥಮಾಡಿಕೊಂಡು ಹೊಂದಿಕೊಳ್ಳುವವರು ಇರುತ್ತಾರೆ. ಕೆಲವರು ಅದೇ ಜಗಳವನ್ನು ನೆಪವಿಟ್ಟುಕೊಂಡು ದೂರವಾಗುವರು ಇರುತ್ತಾರೆ.
ಆದರೆ ಪ್ರೀತಿಯಲ್ಲಿ ಹಾಗಲ್ಲ, ಎಷ್ಟೇ ಜಗಳವಾಗಲಿ, ಮನಸ್ತಾಪವಾಗಲಿ ದೂರವಾಗುವಂತಹ ಯೋಚನೆಯೇ ಮಾಡುವಂತಿರುವುದಿಲ್ಲ. ಜೀವಕ್ಕೆ ಜೀವ ಹೋಗುವವರಿಗೂ ಪ್ರೀತಿಸಿದವರ ಜೊತೆ ಪ್ರೀತಿ, ನಿಷ್ಠೆ, ಕರ್ತವ್ಯದಿಂದ ಇರುವುದು ಪ್ರೇಮಿಯ ಲಕ್ಷಣ.
2)ಸಮಯ ಮತ್ತು ನಂಬಿಕೆ
ಸ್ನೇಹದಲ್ಲಿ ಬಾಲ್ಯದಲ್ಲಿದ್ದವರು ಹರೆಯದರಲ್ಲಿ ಜೊತೆಗಿರುವರು ಎಂಬ ನಂಬಿಕೆ ಇರುವುದಿಲ್ಲ. ಯಾವ ಸಮಯ ಹೇಗೆ ಬದಲಾಗುತ್ತಾರೆ ಎನ್ನುವುದು ಗೊತ್ತಿರುವುದಿಲ್ಲ. ಪ್ರೀತಿಯಲ್ಲಿಯೂ ಹೀಗೆ, ಇಂದು ನೂರು ಆಣೆ ಮಾಡಿದವರು ನಂಬಿಕೆ ಗಳಿಸಿಕೊಂಡವರು ನಾಳೆ ಇರುವರು ಎಂಬ ನಂಬಿಕೆ ಇರುವುದಿಲ್ಲ. ಆದರೆ ಪ್ರೀತಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗುತ್ತದೆ. ನಂಬಿಕೆಯನಿಟ್ಟು ಜೀವನ ಸಾಗಿಸಬೇಕಾಗತ್ತೆ
3)ಗುರಿ
ಸ್ನೇಹದ ಗುರಿ ಆಟದಲ್ಲಿ, ಜೊತೆಗಿರುವುದರಲ್ಲಿದೆ. ಹಾಗೇ, ಗುರಿ ಎನ್ನುವುದು ಬಂದರೆ ಮಿತ್ರು ಕೂಡ ಶತ್ರುವಾಗುತ್ತಾನೆ. ಆದರೆ, ಪ್ರೀತಿಯಲ್ಲಿ ಹಾಗಿರುವುದಿಲ್ಲ ಗಟ್ಟಿಯಾದ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ.
ಗುರಿಯಲ್ಲಿ ನಾ ಹೆಚ್ಚು ನೀ ಕಡಿಮೆ ಎನ್ನುವ ಭಾವನೆ ಇರುವುದಿಲ್ಲ. ಎರಡು ದೇಹ ಒಂದೇ ಜೀವ ಎನ್ನುವಂತೆ ಇಬ್ಬರ ಗುರಿಗಳು ಧ್ಯೆಯಗಳು ಒಂದೇ ಇರುತ್ತವೆ.
4)ಕಷ್ಟ-ಸುಖ
ಸ್ನೇಹಿತರು ನಮ್ಮ ಕಷ್ಟಗಳನ್ನು ಕೇಳಿ ಸಾಂತ್ವನ ಮಾಡುತ್ತಾರೆ, ಆದರೆ ನಮ್ಮ ನೋವನ್ನು ಅವರು ತೆಗೆದುಕೊಳ್ಳುವುದಿಲ್ಲ. ಪರಿಹರಿಸುವುದು ಇಲ್ಲ. ಖುಷಿಯಲ್ಲಿ ಸಂಭ್ರಮಿಸಿದಷ್ಟು ನೋವಲ್ಲಿ ಬರುವರೋ ಇಲ್ಲವೋ ಎಂದು ಹೇಳಲಿಕ್ಕಾಗದು. ಆದರೆ ಪ್ರೀತಿ, ನಮ್ಮ ಪ್ರತಿ ಕಷ್ಟ ಸುಖದಲ್ಲಿ ನಮ್ಮ ಜೊತೆ ಇರಬೇಕಾಗುತ್ತದೆ. ನಮ್ಮ ಕಷ್ಟವನ್ನು ತಮ್ಮ ಕಷ್ಟವೆಂದು ಪ್ರೀತಿಸುವ ಸಂಗಾತಿ ಕಾಳಜಿ ನೀಡುತ್ತಾರೆ. ಸಮಾಧಾನ, ಪ್ರೀತಿ, ನೆಮ್ಮದಿ ಕಾಳಜಿ ಯಿಂದ ನಮ್ಮ ಕಷ್ಟವನ್ನು ಪರಿಹರಿಸಿ ನಮ್ಮ ಮುಖದಲ್ಲಿ ನಗು ತರಿಸುತ್ತಾರೆ.
ಈ ವ್ಯತ್ಯಾಸಗಳು ಸ್ನೇಹ ಮತ್ತು ಪ್ರೀತಿಯ ನಡುವಿನ ಭಾವನಾತ್ಮಕ ಅಂಶಗಳನ್ನು ನಿರ್ವಹಿಸುತ್ತವೆ.
0 Comments