ಉತ್ತಮ ಆರೋಗ್ಯಕ್ಕೆ ಆಹಾರದಲ್ಲಿ ಏನು ಸೇರಿಸಬೇಕು

 ಉತ್ತಮ ಆರೋಗ್ಯಕ್ಕೆ ಆಹಾರದಲ್ಲಿ ಏನು ಸೇರಿಸಬೇಕು

 ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಸರಿಯಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಪದಾರ್ಥಗಳನ್ನು ಸೇರ್ಪಡೆಗೊಳಿಸುವುದು ಬಹಳ ಮುಖ್ಯ. ಸರಿಯಾದ ಆಹಾರವು ದೇಹಕ್ಕೆ ಅಗತ್ಯವಾದ ವಿಟಮಿನ್ಸ್, ಖನಿಜಗಳು, ಪ್ರೋಟೀನ್ ಗಳು, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಒದಗಿಸಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಸೇರಿಸಬೇಕಾದ ಪ್ರಮುಖ ಪದಾರ್ಥಗಳು ಇಲ್ಲಿವೆ.


1) ಹಣ್ಣುಗಳು ಮತ್ತು ತರಕಾರಿಗಳು

* ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಗಳಿಂದ ಖನಿಜಗಳಿಂದ ತುಂಬಿರುತ್ತವೆ. ದಿನನಿತ್ಯದ ಆಹಾರದಲ್ಲಿ ಸೇಬು, ಬಾಳೆಹಣ್ಣು, ದ್ರಾಕ್ಷಿ, ಸೀತಾಫಲ, ಕಲ್ಲಂಗಡಿ, ಪಪ್ಪಾಯಿ ಹಣ್ಣುಗಳು ಹಾಗೆ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್, ಬೀಟ್ರೂಟ್ ನಂತಹ ತರಕಾರಿಗಳನ್ನು ಸೇವಿಸಿ.

* ಹಸಿವು ಕಡಿಮೆ ಮಾಡಲು, ದೇಹವನ್ನು ಶುದ್ಧೀಕರಿಸಲು ಮತ್ತು ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ.


2)ಧಾನ್ಯಗಳು

* ಗೋಧಿ, ಓಟ್ಸ್, ರಾಗಿ, ಮೆಕ್ಕೆಜೋಳ, ಹೆಸರುಕಾಳು, ಕಡಲೆಯಂತಹ ಧಾನ್ಯಗಳು ಫೈಬರ್ ಹಾಗೂ ವಿಟಮಿನ್ ಗಳಿಂದ ತುಂಬಿರುತ್ತವೆ. 

* ಇವು ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ರಕ್ತದೊತ್ತಡ ನಿಯಂತ್ರಣ ಮಾಡುತ್ತವೆ ಮತ್ತು ಹೃದಯ ರೋಗವನ್ನು ಸುಧಾರಿಸುತ್ತದೆ.


3) ಪ್ರೊಟೀನ್ ನ ಸಮೃದ್ಧ ಆಹಾರ

* ಉದ್ದಿನಬೇಳೆ, ಮೊಸರು, ಮೊಟ್ಟೆ, ಕೋಸು ಮತ್ತು ಬೀಜಗಳು(ಬಾದಾಮಿ, ಗೋಡಂಬಿ,ವಾಲ್ನಟ್) ಇವೆಲ್ಲವೂ ಪ್ರೋಟೀನ್ ಗಳ ಉತ್ತಮ ಮೂಲ.

* ಪ್ರೊಟೀನ್ ದೇಹದ ನರಗಳನ್ನು ಸದೃಢ ಮಾಡುತ್ತದೆ ಹಾಗೆಯೇ ದೇಹದ ವಿಕಾಸ, ಉತ್ಸಾಹ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


4) ಒಮೆಗಾ-3 ಫ್ಯಾಟಿ ಆಸಿಡ್ ನಲ್ಲಿರುವ ಆಹಾರ

* ಮೀನುಗಳಲ್ಲಿ ಫ್ಯಾಟಿ ಆಸಿಡ್ ಸಮೃದ್ಧವಾಗಿ ಇರುತ್ತದೆ.

* ಇದು ಹೃದಯರೋಗ ಜ್ಞಾಪಕ ಸ್ಮರಣ ಶಕ್ತಿ ಹಾಗೂ ದೈಹಿಕ ವೃದ್ಧಿಗೆ ಸಹಾಯಕವಾಗುತ್ತದೆ.

5) ಹಸಿರು ಸೊಪ್ಪು

* ಸೊಪ್ಪಿನ ಪದಾರ್ಥಗಳಲ್ಲಿ ನೀರಿನಂಶ ತುಂಬಾನೆ ಇರುತ್ತದೆ. ಹಾಗೆ ಕ್ಯಾಲ್ಸಿಯಂ, ಫೈಬರ್, ಐರನ್ ಮತ್ತು ವಿಟಮಿನ್ K ಹೇರಳವಾಗಿರುತ್ತದೆ.

* ಇದು ಎಲುಬುಗಳ ಆರೋಗ್ಯ, ರಕ್ತ ಹೀನತೆ ನಿವಾರಣೆ ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


6)ಹಾಲು ಮತ್ತು ಅದರ ಉತ್ಪನ್ನಗಳು

* ಹಾಲು, ಮೊಸರು, ಮಜ್ಜಿಗೆ,ತುಪ್ಪ, ಬೆಣ್ಣೆ ಮತ್ತು ಚೀಸ್ ನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಡಿ ಹೇರಳವಾಗಿರುತ್ತದೆ.

* ಎಲುಬು ಮತ್ತು ಹಲ್ಲುಗಳ ಬಲಿಷ್ಠತೆಗೆಯ ಸಹಾಯಕವಾಗಿರುತ್ತದೆ. ಜೀರ್ಣಕ್ರಿಯ ಸುಧಾರಣೆ ಹಾಗೂ ಒತ್ತಡ ನಿವಾರಣೆಗೆ ಸಹಾಯಕವಾಗಿರುತ್ತದೆ.


7) ಜೇನುತುಪ್ಪ ಮತ್ತು ಮಸಾಲೆ ಪದಾರ್ಥಗಳು

* ಜೇನುತುಪ್ಪ, ಅರಿಶಿಣ, ಶುಂಠಿ ಮತ್ತು ಇತರ ಮಸಾಲೆ ಪದಾರ್ಥಗಳು ಆಂಟಿಆಕ್ಸಿಡೆಂಟ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ. ಹಾಗೂ ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತವೆ.


8) ನೀರಿನ ಸೇವನೆ

* ದೇಹದ ಹೈಡ್ರೇಶನ್, ಪಿತ್ತನಾಳದ ಶುದ್ಧೀಕರಣ ಮತ್ತು ಸಕಾಲಿಕ ಜೀರ್ಣಕ್ರಿಯೆಗೆ ಪ್ರಚೋದನೆ ನೀಡಲು ಪ್ರತಿದಿನ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದು ಮುಖ್ಯ.


9) ಮಿತವಾದ ಸಿಹಿ ಮತ್ತು ಉಪ್ಪು

* ಅತಿಯಾದ ಹೆಚ್ಚಿನ ಸಕ್ಕರೆ ಮತ್ತು ಉಪ್ಪು ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬಿಪಿ ಹಾಗು ಶುಗರ್ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಬದಲಿಗೆ ನೈಸರ್ಗಿಕ ಸಿಹಿ ತಿಂಡಿಗಳನ್ನು (ಕರ್ಜೂರ, ಅಂಜೂರ) ಉಪಯೋಗಿಸಿ.


10) ಬೀಜಗಳು

* ಬಾದಾಮಿ, ಗೋಡಂಬಿ ವಾಲ್ ನಟ್, ಕರ್ಜೂರ, ಕಡಲೆ ಬೀಜ ಇನ್ನಿತರ ನಟ್ಸ್ ಗಳನ್ನು ಸೇರಿಸಿ. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗಬಹುದು. ಹೃದಯದ ಆರೋಗ್ಯ, ಚರ್ಮದ ಗುಣಮಟ್ಟವನ್ನು ಸುಧಾರಿಸುವುದರಲ್ಲಿ ಸಹಾಯಕವಾಗುತ್ತವೆ.


  ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶ ಸ್ವಾಭಾವಿಕ ಮತ್ತು ರಾಸಾಯನಿಕರಹಿತ ಪದಾರ್ಥಗಳನ್ನು ಸೇರಿಸಿ. ಉತ್ತಮ ಜೀವನ ಶೈಲಿಗೆ ಉತ್ತಮ ಆರೋಗ್ಯ, ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರವು ಸಹಾಯಕವಾಗಿದೆ. ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಾಯಕವಾಗಿದೆ.

Post a Comment

0 Comments