ಪ್ರಿಯಕರನಿಗೊಂದು ಪ್ರೇಮಕೋರಿಕೆ ಪತ್ರ ❤️

ಹೇ ಚಿತ್ತಚೋರನೇ....
ನೀನೆಂದರೆ ಹೇಳಲು ಪದಗಳೇ ಸಿಗದು..
ನೀನೆಂದರೆ ಹೊಗಳಲು ಕಾವ್ಯಗಳು ಸಾಲದು..!
ನಿನ್ನ ಆ ಮೊದಲ ನೋಟ, ಯಾವ ಮಾಟಕ್ಕೂ ಕಡಿಮೆಯಿಲ್ಲ.. ನಿನ್ನ ಆ ಮಗುವಿನಂತಹ ಮುಗ್ಧತೆ, ಎಲ್ಲರಿಗೂ ನೀ ತೋರುವ ಮಮತೆ ಅಷ್ಟಿಷ್ಟಲ್ಲ.. ಧೈರ್ಯದಲ್ಲಿ ವೀರನೂ ನೀನು ಶೌರ್ಯದಲ್ಲಿ ಶೂರನೂ ನೀನು. ಅಕ್ಕರೆಯಲ್ಲಿ ಅಪ್ಪನಂತೆ, ಪ್ರೀತಿ ಮಮತೆಯಲಿ ಅಮ್ಮನಂತೆ ನೀನು. ಕಣ್ಣ ಸನ್ನೇಯಲ್ಲೇ ಕೊಲ್ಲೋ ನಿನ್ನನ್ನು, ನನ್ನ ಕಣ್ಣಂಚಲ್ಲೇ ಗೆಲ್ಲಬೇಕೆಂಬ ಬಯಕೆ ನನ್ನದು. ಕಲ್ಲಂತಹ ನಿನ್ನ ಗಟ್ಟಿಹೃದಯವ ಕರಗಿಸೋ ಪ್ರಯತ್ನದಲ್ಲಿ ನಾ ಸೋಲಲಾರೇನು.! ನಿನ್ನ ಮೇಲಿನ ಈ ಪ್ರೀತಿಯ ಹೇಳಲು ಭಯವಿಲ್ಲ, ಒಪ್ಪಿಕೊಳ್ಳದೆ ಹೋದರೆ ಹೇಗೆ ಎನ್ನುವ ಭಯವಷ್ಟೇ..!! ಭಯವಾದರೂ ಹಿಂದೆ ಸರಿಯುವವಳು ನಾನಲ್ಲ.. ನಿನ್ನ ಹೃದಯವ ಗೆದ್ದು, ನಿನ್ನ ಹೃದಯ ಸಾಮ್ರಾಜ್ಯದ ಒಡತಿಯಾಗುವವಳು ನಾನು. 
ಒಪ್ಪಿಗೆ ಕೋರುವ ಮುನ್ನ ನೆನಪಿಡು ಹುಡುಗ, ಈಗ ಹಿಡಿದ ಕೈಯನ್ನು ಮತ್ತೆಂದೂ ಬಿಡಲಾರೆ ಎಂದರೆ ಕೈಹಿಡಿದು ಪ್ರೀತಿಕೊಡು. ಇಲ್ಲವಾದರೆ ನನ್ನ ಪ್ರೀತಿ, ನಿನ್ನ ನೆನಪಲ್ಲಿ ಉಸಿರುಗಟ್ಟಿ ಉಸಿರು ಬಿಡುವುದಂತೂ ಸತ್ಯ 

ಇಂತಿ ನಿನ್ನ ಪ್ರೀತಿಯ 
ಹೃದಯವಾಸಿ 

Post a Comment

0 Comments