ಮಹಿಳೆಯರು ಮಾಸಿಕ ಚಕ್ರದ ಸಮಯದಲ್ಲಿ ಉಪವಾಸ ಮಾಡೋದು ಸರಿಯೋ? ತಪ್ಪೋ? || Intermittent fasting in period time

ಈಗಿನ ಕಾಲಮಾನದಲ್ಲಿ ಆರೋಗ್ಯದ ಅರಿವು ಹೆಚ್ಚಾದಂತೆ ಹೊಸ ಹೊಸ ವಿಧಾನಗಳು ಕೇಳಿಬರುತ್ತಿವೆ. ಹಾಗೇ ಇತ್ತೀಚಿಗೆ ಕೇಳಿಬರುತ್ತಿರುವುದು ಇಂಟರ್ಮಿಟೆಂಟ್ ಫಾಸ್ಟಿಂಗ್(Intermittent Fasting) ಅನ್ನೋ ಪದ. ಕಡಿಮೆ ಆಹಾರ ಸೇವಿಸಿ, ಉಳಿದ ಸಮಯದಲ್ಲಿ ಉಪವಾಸ ಇರುವಂತಹ ವಿಧಾನ. ಉಪವಾಸ ಮಾಡುವುದರಿಂದ ತುಂಬಾ ಉಪಯೋಗಗಳು ಇವೆ. ಆದರೆ, ಮಾಸಿಕ ಚಕ್ರದಲ್ಲಿರುವ(period) ಮಹಿಳೆಯರು ಉಪವಾಸ ಮಾಡಬಹುದಾ ಅನ್ನೋ ಪ್ರಶ್ನೆ ಉಂಟಾಗುತ್ತದೆ. ಅದೆಲ್ಲದಕೂ ಇಲ್ಲಿದೆ ಉತ್ತರ.

🔸ಹಾರ್ಮೋನ್ ಬದಲಾವಣೆ 
    
ಮಹಿಳೆಯರ ದೇಹದಲ್ಲಿ  ಮಾಸಿಕ ಚಕ್ರದ ಸಮಯದಲ್ಲಿ ಇಸ್ಟ್ರೋಜೆನ್ ಪ್ರೊಜೆಸ್ಟಿರಾನ್ ಹಾರ್ಮೋನ್ಗಳಲ್ಲಿ ಬದಲಾವಣೆ ಉಂಟಾಗುತ್ತವೆ. ಈ ಬದಲಾವಣೆಗಳು ದೇಹದ ಶಕ್ತಿಯ ಮೇಲೆ, ಆಹಾರದ ಆಕಾಂಕ್ಷೆ, ನಿದ್ದೆ ಮತ್ತು ಭಾವನಾತ್ಮಕವಾಗಿ ಪರಿಣಾಮ ಬೀರುತ್ತದೆ.

🔹ಇಂತಹ ಸಮಯದಲ್ಲೂ ಉಪವಾಸ ಮಾಡುವುದರಿಂದ ದೇಹಕ್ಕೆ ಇನ್ನೂ ನಿಶ್ಯಕ್ತಿಯಾಗಿ ತಲೆನೋವು, ಸುಸ್ತು, ಬೇಸರ ಉಂಟಾಗುತ್ತದೆ. ಕೆಲವೊಮ್ಮೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಕೂಡ ಪರಿಣಾಮ ಬೀರಿ ಮನಸಿನ ಮೇಲೆ ಒತ್ತಡ, ಭಾವನೆಗಳ ನಿಯಂತ್ರಣ ತಪ್ಪಿ ಹೋಗಬಹುದು. 

🔸ಇಂತವರು ಉಪವಾಸ ಮಾಡಬೇಡಿ 

• ಅನಿಯಮಿತ ಪಿರಿಯಡ್ ಹೊಂದಿರುವ                 ಮಹಿಳೆಯರು 
• ಬಲಹೀನತೆ ಹಾಗೂ ತೂಕದ ಕೊರತೆ ಇದ್ದವರು 
• PCOS ಅಥವಾ ಪಿಟ್ಯುಟರಿ  ಸಮಸ್ಯೆ ಇದ್ದವರು.
• ಗರ್ಭಿಣಿಯರು ಹಾಗೂ ಹಾಳು ಕೊಡುವ   ತಾಯಂದಿರು ಕೂಡ ಉಪವಾಸ ಮಾಡಬಾರದು.

🔹ಏನು ಮಾಡಬೇಕು?

ಪಿರಿಯಡ್ ಸಮಯದಲ್ಲಿ ಅತೀ ನೋವಿನಿಂದ ಸುಸ್ತಾಗಿ ಕೆಲವರಿಗೆ ಊಟ ಸೇರೋಲ್ಲ. ಹಾಗಂತ ಉಪವಾಸ ಮಾಡುವುದನ್ನು ನಿಲ್ಲಿಸಿ. ಈ ರೀತಿಯ ಬದಲಾವಣೆ ಮಾಡಿಕೊಳ್ಳಿ.

▪️ಪಿರಿಯಡ್ ಸಮಯದಲ್ಲಿ ದೇಹಕ್ಕೆ ಬೇಕಾದ    ಪೋಷಕಾಂಶಗಳನ್ನು, ಆರೋಗ್ಯಕರ ಆಹಾರಗಳನ್ನು ಕೊಡಿ.
▪️ಅತೀ ಹೆಚ್ಚು ನೀರು ಕುಡಿಯಿರಿ. ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿ.

ಮಹಿಳೆಯರು ಉಪವಾಸ ಮಾಡಬೇಕಾದರೆ, ಅವರವರ ದೇಹದ ಸ್ಥಿತಿ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲರ ದೇಹಸ್ಥಿತಿ ಒಂದೇ ತರ ಇರುವುದಿಲ್ಲ. ಇಷ್ಟೆಲ್ಲ ಪರಿಣಾಮಗಳನ್ನು ನೋಡಿದಾಗ ಸೂಕ್ಷ್ಮಮತೆಯಿಂದ ಉಪವಾಸದ ವಿಧಾನದ ಮೇಲೆ ನೀಗ ಇಡುವುದು ಒಳ್ಳೇದು.

Post a Comment

0 Comments