ಆನ್ಲೈನ್ ಕ್ಲಾಸ್ ಗಳಿಂದ ಮಕ್ಕಳ ಮೇಲೆ ಬೀರಿರೋ ಪರಿಣಾಮಗಳನ್ನು ಪೋಷಕರು ನಿಭಾಯಿಸಲು ಸುಲಭ ದಾರಿಗಳು

ಕೋವಿಡ್ ನಂತರದ ಕಾಲದಲ್ಲಿ online ಶಿಕ್ಷಣ ಅಥವಾ ದೂರಸ್ತ ಶಿಕ್ಷಣ (Remote schooling) ಒಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದರಿಂದ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್ ಟಾಪ್ ಮುಂದೆ ಕಳೆಯುತ್ತಿದ್ದಾರೆ. ಒತ್ತಡದ ಬದುಕಿನ ಕೆಲಸಗಳ ನಡುವೆ ತಂದೆ ತಾಯಿಯರು ಮಕ್ಕಳ ಮೇಲೆ ಗಮನಹರಿಸುವುದಂತು ತೀರ ಕಡಿಮೆಯಾಗಿದೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ತುಂಬಾ ಪರಿಣಾಮ ಬೀರಬಹುದು. ಮಕ್ಕಳ ಭವಿಷ್ಯ ಹೆತ್ತವರ ಜವಾಬ್ದಾರಿ ಯಾಗಿದ್ದರಿಂದ ಈ ಕೆಳಗಿನ ರೀತಿಯ ಜೀವನಶೈಲಿಯನ್ನು ಬದಲಿಸಿಕೊಳ್ಳುವುದು ಉತ್ತಮ.

🔴ಶುರುವಾಗಿದ್ದೆಲ್ಲಿ ಈ ಸಮಸ್ಯೆ?

▪️ ಶಿಕ್ಷಣಕ್ಕಾಗಿ ಶಾಲೆಗಳಿಂದ ಆನ್ಲೈನ್ ಕ್ಲಾಸ್ ಗಳನ್ನು ನೀಡಲಾಯಿತು.
▪️ ಸ್ಕ್ರೀನ್ ಟೈಮ್ ನಿಯಂತ್ರಣವಿಲ್ಲದೆ ಮಕ್ಕಳು ಹೋಮ್ ವರ್ಕ್ ಆಗಿ ಅಸೈನ್ಮೆಂಟ್ ಗಾಗಿ ಗೂಗಲ್ ಯೂಟ್ಯೂಬ್ ಬಳಕೆ ಮಾಡೋಕೆ ಶುರು ಮಾಡಿದ್ದು.
▪️ ಪೋಷಕರ ಸಲಹೆ ಕಡಿಮೆಯಾಗಿ ಮಕ್ಕಳು ಮೊಬೈಲ್ ಮೇಲೆ ಅವಲಂಬಿತರಾದರು.
▪️ ಕ್ಲಾಸ್ ಮುಗಿದ ಬಳಿಕವೂ ಕೂಡ ಆಟ ಮನರಂಜನೆಗಾಗಿ ಹೊರಗೆ ಹೋಗದೆ ಮೊಬೈಲ್ ಬಳಕೆ.

 ಅದರಿಂದ ಮಕ್ಕಳು ದಿನಕ್ಕೆ ಆರರಿಂದ ಎಂಟು ಗಂಟೆಗಳವರೆಗೆ ಸ್ಕ್ರೀನ್ ಮುಂದೆ ಕಳೆಯುವ ಪರಿಸ್ಥಿತಿ ನಿರ್ಮಾಣವಾಯಿತು 

◾ ಸಮತೋಲನ ಸಾಧಿಸಲು ದಾರಿಗಳು 

🔸 ದಿನಚರಿ ನಿಯಂತ್ರಣ 
 ಶಿಕ್ಷಣ, ಆಟ, ಊಟ, ವಿಶ್ರಾಂತಿ ಎಲ್ಲದಕ್ಕೂ ಸಮಯ ನಿಗದಿಪಡಿಸಿ. ಆ ದಿನಚರಿಯನ್ನು ಒಂದು ಬೋರ್ಡ್ ಮೇಲೆ ಬರೆದು ಗೋಡೆಗೆ ಹಾಕಿ ಇದನ್ನು ಮಕ್ಕಳಿಗೆ ಪಾಲನೆ ಮಾಡಲು ಸಹಾಯ ಮಾಡಿ.

🔸 ಸ್ಕ್ರೀನ್ ಬ್ರೇಕ್ 
 ಮಕ್ಕಳು ಆನ್ಲೈನಲ್ಲಿ ಓದ್ತಿದ್ದರೂ ಸಹ 10-15 ನಿಮಿಷಕ್ಕೊಮ್ಮೆ ಸ್ಕ್ರೀನ್ ಬ್ರೇಕ್ ಕೊಡಿಸಿ. ಆ ಸಮಯದಲ್ಲಿ, ಆಕರ್ಷಕವಾದ ಚಿತ್ರಕಲೆ, ಹಾಡು, ಪುಸ್ತಕಗಳನ್ನು ಓದುವುದು, ಆಟ ಆಡುವುದು ಈ ರೀತಿ ಹವ್ಯಾಸಗಳನ್ನು ಬೆಳೆಸಿ.

🔸 ಪೋಷಕರ ಭಾಗವಹಿಸುವಿಕೆ 
 ಸಂಜೆ ವೇಳೆಯಲ್ಲಿ ಮಕ್ಕಳೊಂದಿಗೆ ಸಮಯ ಕಳೆಯಿರಿ. ಶಾಲೆಯ ಪಾಠಗಳು ಹೋಂವರ್ಕ್ ಗಳನ್ನು ಚರ್ಚೆ ಮಾಡಿ. ಹಾಗೆ ಮಗುವಿನ ದಿನಚರಿಯ ಬಗ್ಗೆ ವಿಚಾರಿಸಿ. ಆ ಮಗುವಿನ ಭವಿಷ್ಯದ ಬಗ್ಗೆ ಪ್ರೋತ್ಸಾಹದ ಮಾತುಗಳನ್ನ ಆಡಿ. ಇದರಿಂದ ಮಕ್ಕಳ ಮನಸ್ಸು ಮನೋರಂಜನೆಗೆ ಹೋಗದೆ ಜವಾಬ್ದಾರಿ ಅತ್ತ ಹರಿಯುತ್ತದೆ. 

🔸 ಸ್ಮಾರ್ಟ್ ಫೋನ್ ಟ್ಯಾಬ್ ನಲ್ಲಿ ಕಂಟ್ರೋಲ್ 
 ಮಕ್ಕಳು ಓದ್ತಿದ್ದಾರೋ ಇಲ್ಲವೋ ಹಾಗೆ ಯಾವ ಯಾವ app ಬಳಸ್ತಿದ್ದಾರೆ ಎಲ್ಲವನ್ನು ಅವಲೋಕನ ಮಾಡಿ.

◾ ಪರಿಣಾಮಗಳು 
 ಹೆಚ್ಚಿನ ಸ್ಕ್ರೀನ್ ಸಮಯದಿಂದ ನಿದ್ದೆ ಕೊರತೆ, ಕಣ್ಣಿನ ತೊಂದರೆ ಉಂಟಾಗುತ್ತದೆ. ಬರೀ ಮೊಬೈಲ್ ನೋಡುತ್ತಾ ಊಟ ಮಾಡದೆ ಹೋದಲ್ಲಿ ದೇಹದ ಆರೋಗ್ಯ ಕೊಂದುತ್ತಾ ಮಾನಸಿಕವಾಗಿ ಕೂಡ ಪರಿಣಾಮ ಬೀರುತ್ತದೆ. ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಾರೆ. ಹವ್ಯಾಸಗಳೆಲ್ಲ ಮರೆತು ಒಂಟಿತನಕ್ಕೆ ಗುಲಾಮರಾಗುತ್ತಾರೆ.

 ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ತಪ್ಪಿಸುವುದು ಕಷ್ಟ. ಆದರೆ, ಜಾಣ್ಮೆಯಿಂದ ನಿಯಂತ್ರಿಸುವುದರಿಂದ ಸಾಧ್ಯವಾಗುತ್ತದೆ.
 ಪೋಷಕರ ಯೋಜನೆ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ಮನೆಯಲ್ಲಿ ಜವಾಬ್ದಾರಿ ಹಂಚಿಕೆ ಮತ್ತು ದಿನಚರಿಯ ಮೂಲಕ ಸಕಾರಾತ್ಮಕ ಹಾಗೂ ಆರೋಗ್ಯಕರ ಬಳಕೆಗೆ ದಾರಿ ಮಾಡಬಹುದು.

Post a Comment

0 Comments