ಪಪ್ಪಾಯ ತಿಂದ್ರೆ ಗರ್ಭಪಾತ ಗ್ಯಾರಂಟಿ..! || ಕಾರಣಗಳು ಇಲ್ಲಿದೆ

ಪಪ್ಪಾಯಿ ತಿಂದರೆ ಗರ್ಭಹಾನಿ (ಮಿಸ್ಕ್ಯಾರೆಜ್) ಆಗಬಹುದು ಎಂಬ ಮಾತು ವಕೇಳೇ ಇರ್ತೀರಿ. ಇಡು ನಿಜಾನಾ ಸುಳ್ಳೋ ಅನ್ನೋ ಅನುಮಾನ ಕೆಲವರಲ್ಲಿ ಕಾಡ್ತಾನೆ ಇರತ್ತೆ. ಹಾಗಿದ್ರೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. 

ಹೌದು, ಪಪ್ಪಾಯ ತಿಂದರೆ ಗರ್ಭಪಾತ ಆಗೋದು ನಿಜ. ಇನ್ನೂ ಹಣ್ಣೇ ಆಗದಿರುವಂತಹ, ಕಗ್ಗು (ಕಾಯಿ) ಪಪ್ಪಾಯಿ (raw or unripe papaya) ತಿಂದಾಗ ಗರ್ಭಪಾತ ಆಗೋ ಸಾಧ್ಯತೆ ಇರತ್ತೆ. ಹೌದಾ? ಅಂತದ್ದೇನಿದೆ ಅದರಲ್ಲಿ ಅನ್ನೋದು ಇಲ್ಲಿ ನೋಡಿ..!


1. ಪ್ಯಾಪೈನ್ ಎಂಬ ಎಂಜೈಮ್

ಕಾಯಿ ಪಪ್ಪಾಯಿಯಲ್ಲಿ ಪ್ಯಾಪೈನ್ (Papain) ಎಂಬ ಎಂಜೈಮ್ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಇದು ದೇಹದ ಪ್ರೊಸ್ಟಾಗ್ಲಾಂಡಿನ್ ಮಟ್ಟವನ್ನು ಹೆಚ್ಚಿಸಬಹುದು, ಈ ಪ್ರೊಸ್ಟಾಗ್ಲಾಂಡಿನ್  ಅಂದ್ರೆ ದೇಹದಲ್ಲಿ ರುವ ರಾಸಾಯನಿಕ ಹಾರ್ಮೋನ್ ಗಳನ್ನು 
ಹಲವಾರು ದೈಹಿಕ ಕ್ರಿಯೆಗಳಿಗೆ ಸಮಾನವಾಗಿ ನಿಯಂತ್ರಿಸುತ್ತೆ. ಈ ಪ್ರೊಸ್ಟಾಗ್ಲಾಂಡಿನ್ ಮಟ್ಟದ ಹೆಚ್ಚಾದರೆ ಗರ್ಭಪಾತ ಆಗತ್ತೆ.

2. ಗರ್ಭಪಾತವನ್ನು ಪ್ರೇರೇಪಿಸುವ ಶಕ್ತಿ

ಪ್ಯಾಪೈನ್ ಎಂಜೈಮ್ ಗರ್ಭದ ಒತ್ತಡವನ್ನು ಹೆಚ್ಚಿಸಿ ಗರ್ಭಪಾತ  ಆರಂಭವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

3. ಯುಟೆರಸ್ (ಗರ್ಭಾಶಯ) ಮೇಲೆ ಪರಿಣಾಮ

 ಪಪ್ಪಾಯಿಯಲ್ಲಿರುವ ಕೆಲವು ರಾಸಾಯನಿಕ ಪದಾರ್ಥಗಳು ಗರ್ಭಾಶಯವನ್ನು ಸಂಕುಚಿಸುವಂತೆ ಮಾಡಬಹುದು, ಇದು ಭ್ರೂಣದ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.


ವೈದ್ಯರ ಸಲಹೆ ಮೇರೆಗೆ ಆಹಾರವನ್ನು ಸೇವಿಸುವುದು ಉತ್ತಮ.


Post a Comment

0 Comments