Biggboss 11 : ಬಿಗ್ ಬಾಸ್ ಮನೆಗೆ ಮೋಕ್ಷಿತಾ ಕುಟುಂಬ. ತನ್ನ ತಮ್ಮ ತನ್ನನ್ನು ಗುರುತಿಸದ್ದಕ್ಕೆ ಮೋಕ್ಷಿತಾ ಆಕ್ರಂದನ.. 👇🏻 ಪೂರ್ತಿ ಓದಿ

ಬಿಗ್ ಬಾಸ್ 11 ಕನ್ನಡ :  ಕನ್ನಡ ಖ್ಯಾತಿಯ ಬಿಗ್ ಬಾಸ್ ಶೋ ಸ್ಪರ್ಧಿಗಳು ದಿನೇ ದಿನೇ ಜನರ ಮನಸ್ಸನ್ನು  ಗೆಲ್ಲುತ್ತಿದ್ದಾರೆ. ದಿನೇ ದಿನೇ ವಿಭಿನ್ನ ಆಟಗಳು, ವಿಭಿನ್ನ ವ್ಯಕ್ತಿತ್ವಗಳು ಜನರ ಮನಸನ್ನು ಗೆದ್ದು ಬಿಗ್ ಬಾಸ್ ಮನೆ ಮನಗಳ ಮಾತಾಗಿದೆ.

ಇದೀಗ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆಗೆ ಹತ್ತಿರವಾಗಿದ್ದಾರೆ. ಕುಟುಂಬದಿಂದ ದೂರವಿದ್ದ ಸ್ಪರ್ಧಿಗಳಿಗೆ ಈ ವಾರ ಕುಟುಂಬದವರ ಭೇಟಿ ಮಾಡಲು ಅವಕಾಶ ನೀಡಿದ್ದಾರೆ. ಹೌದು, ಈ ವಾರ ಸ್ಪರ್ಧಿಗಳಿಗೆ ಫ್ಯಾಮಿಲಿ ರೌಂಡ್ ನೀಡಿದ್ದಾರೆ.

ಮೋಕ್ಷಿತಾಳ ತಂದೆ ತಾಯಿ ಹಾಗೂ ವಿಶೇಷಚೇತನ ಹೊಂದಿರುವ ಮೋಕ್ಷಿತಾಳ ತಮ್ಮ ಎಲ್ಲರು ಮನೆಗೆ ಪ್ರವೇಶಿಸಿದ್ದಾರೆ. ತಮ್ಮನನ್ನು ಮಗನಂತೆ ನೋಡಿಕೊಳ್ಳುತ್ತಿದ್ದ ಮೋಕ್ಷಿತಾಳಿಗೆ, ತಂದೆ ತಾಯಿ ಬಂದಿದ್ದಕಿಂತ ಅವಳ ತಮ್ಮ ಬಂದಿದ್ದು ಹೇಳತೀರದಷ್ಟು ಖುಷಿಗೆ ಕಾರಣವಾಗಿತ್ತು. ಆದರೆ, ಅವಳ ತಮ್ಮ ಅವಳನ್ನು ನೋಡಿದರು ಗುರುತಿಸಲ್ಲ. " ನನ್ನನ್ನ ನಮ್ಮ ತಮ್ಮ ಗುರುತಿಸುತ್ತಿಲ್ಲ, ಮರೆತಿದ್ದಾನೆ ಎಂದು ಆಕ್ರಂದನ ಹೊರ ಹಾಕಿದ್ದಾರೆ ಮೋಕ್ಷಿತಾ. 

ಆ ಸನ್ನಿವೇಶ ನೋಡಿ ಕಣ್ಣು ತುಂಬಿಕೊಳ್ಳುವುದಂತೂ ಸತ್ಯ. ಅಣ್ಣ ತಮ್ಮಂದಿರಿಗೆ ಅಕ್ಕ ಆಗುವುದಕ್ಕಿಂತ, ಅಮ್ಮನಾಗಿ, ಅಮ್ಮನಂತೆ ನೋಡಿಕೊಳ್ಳುವ ಅಕ್ಕ ಸಿಗುವುದು ಅದೃಷ್ಟವೇ ಸರಿ. 

Post a Comment

0 Comments