ಪಹಲ್ಗಂ ಅಲ್ಲಿ ಭೀಕರ ಉಗ್ರದಾಳಿ || ಭಯಾನಕ ಘಟನೆ

ಪಹಲ್ಗಾಂನಲ್ಲಿ ಭೀಕರ ಉಗ್ರದಾಳಿ: 28 ಪ್ರವಾಸಿಗರು ಹತ್ಯೆಗೊಳಗಾದ ಭಯಾನಕ ಘಟನೆ

2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂ ಬಳಿ ಬೈಸರಾನ್ ಕಣಿವೆಯಲ್ಲಿ ಭೀಕರ ಉಗ್ರದಾಳಿ ಸಂಭವಿಸಿದೆ. ಈ ದಾಳಿಯಲ್ಲಿ ಕನಿಷ್ಠ 28 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಇದೀಗ ದೇಶದೆಲ್ಲೆಡೆ ಶೋಕ ಉಂಟುಮಾಡಿದೆ.

ಈ ದಾಳಿಗೆ ಲಷ್ಕರ್ ಎ ತೋಯ್ಬಾ ಎಂಬ ಉಗ್ರ ಸಂಘಟನೆಯ ಶಾಖೆಯಾಗಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್ (TRF)’ ಹೊಣೆಹೊರಲಿದೆ. ದಾಳಿಕೋರರು ಅರಣ್ಯ ಪ್ರದೇಶದಿಂದ ಹೊರಬಂದು ಹಿಂದೂ ಪ್ರವಾಸಿಗರ ಗುಂಪಿನ ಮೇಲೆ ನಿರ್ದಯವಾಗಿ ಗುಂಡು ಹಾರಿಸಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಿರುವ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ, ಅಪರಾಧಿಗಳಿಗೆ ಗಟ್ಟಿಯಾಗಿ ತಕ್ಕ ಪಾಠ ಕಲಿಸುವುದಾಗಿ ತಿಳಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತದ ಭೇಟಿಯಲ್ಲಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿರುವುದು, ಇದರ ಹಿಂದೆ ಬೇರೆಯೇ ಉದ್ದೇಶವಿದೆ ಎಂಬ ಶಂಕೆಗೆ ದಾರಿ ಮಾಡಿದೆ. ಭದ್ರತಾ ಪಡೆಗಳು ಈಗ ಪಹಲ್ಗಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲ್ಪಟ್ಟಿದ್ದು, ಉಗ್ರರ ಶೋಧ ಕಾರ್ಯ ಜೋರಾಗಿದೆ.

ಈ ಘಟನೆಯು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪ್ರವಾಸೋದ್ಯಮಕ್ಕೆ ಗಂಭೀರವಾದ ಧಕ್ಕೆ ನೀಡಿದ ಈ ದಾಳಿ, ಸ್ಥಳೀಯ ಆರ್ಥಿಕತಿಗೆ ಹಾನಿಕಾರಕವಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಪಡಿಸಿದ ನಂತರ ಉಂಟಾದ ರಾಜಕೀಯ ಅಸ್ಥಿರತೆ ಕೂಡ ಈ ಪರಿಸ್ಥಿತಿಗೆ ಕಾರಣವಾಯಿತೆಂಬ ಮಾತುಗಳು ಕೇಳಿಬರುತ್ತಿವೆ.

ಸಾವಿಗೀಡಾದವರ ಕುಟುಂಬದವರಿಗೆ ನೋವ ಬರಿಸೋ ಶಕ್ತಿ ಆ ಭಗವಂತ ನೀಡಲಿ..!



Post a Comment

0 Comments