ಈ ವಾರ ತಮ್ಮ ಅದ್ಭುತ ಆಟದ ಮೂಲಕ, ವ್ಯಕ್ತಿತ್ವದ ಮೂಲಕ ಮನೆಯ ಕ್ಯಾಪ್ಟನ್ ಆಗಿದ್ದಲ್ಲದೆ, ಕಿಚ್ಚನ ಮೆಚ್ಚುಗೆಯನ್ನು ಗಳಿಸುತ್ತಾರೆ ಭವ್ಯ ಗೌಡ ಅವರು. ಆದರೆ, ಕೆಲ ಸಹ ಸ್ಪರ್ಧಿಗಳ ಕಣ್ಣಲ್ಲಿ ಹಾಗೂ ನೋಡುಗರ ಕಣ್ಣಲ್ಲಿ ಕಾಣುತ್ತಿರುವುದೇನೆಂದರೆ ಭವ್ಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವುದು ಹಾಗೂ ಕಿಚ್ಚನ ಚಪ್ಪಾಳೆ ಪಡೆದಿರುವುದು ಭವ್ಯಳ ಸಹ ಸ್ಪರ್ಧಿ ಹಾಗೂ ಆತ್ಮೀಯ ಸ್ನೇಹಿತನಾದ ತ್ರಿವಿಕ್ರಮ್ ಅವರಿಗೆ ಸ್ವಲ್ಪವೂ ಇಷ್ಟವಾಗಿಲ್ಲವೆಂದು ಅನಿಸುತ್ತಿದೆ ಎನ್ನುತ್ತಿದ್ದಾರೆ.
ಇದೆಲ್ಲದಕ್ಕೂ ಸಾಕ್ಷಿಯಂತೆ ಕಿಚ್ಚನ ಚಪ್ಪಾಳೆ ಸಿಕ್ಕಾಗ ತ್ರಿವಿಕ್ರಮ್ ಅವರು ಯಾವುದೇ ಭಾವನೆ ತೋರಿಸಲಿಲ್ಲ. ಹಾಗೇ ಮನೆಯಲ್ಲಿಯೂ ಕೂಡ ಭವ್ಯಳಿಗೆ ಕೆಲವೊಂದು ಅಸಹಾಯಕ ಪದಗಳನ್ನು ಬಳಸುತ್ತಿದ್ದಾರೆ, 'ಚಿಕ್ಕ ಹುಡುಗೀಯೆಂದು ಚಿಕ್ಕ ಆಟ ನೀಡಿ ಬಿಗ್ ಬಾಸ್ ನಿನ್ನ ಗೆಲ್ಲಿಸ್ತಿದ್ದಾರೆ' ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಅದಕ್ಕೆ ಭವ್ಯ ಕೂಡ ತಿರುಗೇಟು ಕೊಟ್ಟಿದ್ದಾರೆ. ಮಾತಿನ ಮೇಲೆ ನಿಗಾ ಇರಲಿ ಎಂದು. ಕ್ಯಾಪ್ಟನ್ ಆದಳು ಎಂಬ ಗರ್ವದಲ್ಲಿ ಅವರು ಹೇಳಿಲ್ಲ, ಕಷ್ಟಪಟ್ಟು ಅವರು ಆಡಿ ಗೆದ್ದಾಗ ಇಂತಹ ಮಾತುಗಳನ್ನು ಕೇಳಿದಾಗ ಯಾರಿಗಾದರೂ ಕೋಪ ಬರುವುದು ಸಹಜ.
ಇನ್ನೂ ತ್ರಿವಿಕ್ರಮ್ ಅವರ ಸಣ್ಣ ಸಣ್ಣ ಗೆಲುವಲ್ಲು ಖುಷಿ ಪಡುವ ಭವ್ಯ ಅವರಿಗೆ. ತ್ರಿವಿಕ್ರಮ್ ಅವರ ಈ ನಡೆ ನುಡಿ ಬೇರೆ ರೀತಿಯೇ ಅನಿಸುತ್ತಿದೆ. ತ್ರಿವಿಕ್ರಮ್ ಮೈಂಡ್ ಗೇಮ್ ಆಡ್ತಿದ್ದಾರೆ ಹಾಗೂ ಭವ್ಯ ಅವರನ್ನು ತನ್ನ ಮೈಂಡ್ ಗೇಮ್ ಗೆ ಬಲಿಪಶು ಮಾಡುತ್ತಿದ್ದಾರೆ ಎಂದು ಎಲ್ಲಾ ನೋಡುಗರಿಗೂ ಅನಿಸುತ್ತಿದೆ.
ಏನೇ ಇರಲಿ ಇಬ್ಬರ ವ್ಯಕ್ತಿತ್ವ ಅವರಿಗೆ ಬಿಟ್ಟದ್ದು, ಫಿನಾಲೆಗೆ ಹೋಗುವಂತಹ ಎರಡು ಸ್ಪರ್ಧಿಗಳು ಅವರು. ಯಾವುದಕ್ಕೂ ವಿಚಲಿತರಾಗದೆ ಗೆದ್ದು ಬರಬೇಕೆನ್ನುವುದು ಎಲ್ಲರ ಆಶಯ.
0 Comments