ನೀರಲ್ಲಿ ಸಣ್ಣ ಅಲೆಯೊಂದು song lyrics || neeralli sanna aleyondu song lyrics || kannada song lyrics

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಚೂರಾದ ಚಂದ್ರನೀಗ 

ಇಲ್ಲೊಂದು ಚೂರು ಅಲ್ಲೊಂದು ಚೂರು 

ಒಂದಾಗಬೇಕು  ಬೇಗ 

ತುಸು ದೂರ ಸುಮ್ಮನೆ 

ಜೊತೆಯಲ್ಲಿ ಬಂದೆಯಾ 

ನಡುವೆಲ್ಲೋ ಮೆಲ್ಲಗೆ ಮಾಯವಾದೆಯಾ 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಚೂರಾದ ಚಂದ್ರನೀಗ 

ಇಲ್ಲೊಂದು ಚೂರು ಅಲ್ಲೊಂದು ಚೂರು 

ಒಂದಾಗಬೇಕು ಬೇಗ 

ಇದ್ದಲ್ಲಿ ಆಲಿಸ ಬಲ್ಲೆ 

ನಿನ್ನೆಲ್ಲ ಪಿಸುಮಾತು 

ನನ್ನಲ್ಲಿ ನೀನಿರುವಾಗ 

ಇನ್ನೇಕೆ ರುಜುವಾತು 

ನೆನಪಿನಲ್ಲೇ ನೀನೀಗ 

ಎಂದಿಗಿಂತ ಸನಿಹ 

ಅಳಿಸಲಾರೆ ನಾನಿಂದು 

ಮನದ ಗೋಡೆ ಬರಹ 

ಸಹಿಯಾದ ಮೇಲೆ ಸಹ 

ಗೀತೆಯೊಂದು 

ಮರೆಯಾಯಿತೇಕೆ ನೋಡು 

ಇಲ್ಲೊಂದು ಸಾಲು ಅಲ್ಲೊಂದು ಸಾಲು 

ಬೆರೆತಾಗಲೇನೆ ಹಾಡು 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಚೂರಾದ ಚಂದ್ರನೀಗ 

ಇಲ್ಲೊಂದು ಚೂರು ಅಲ್ಲೊಂದು ಚೂರು 

ಒಂದಾಗಬೇಕು ಬೇಗ 

ದಾರೀಲಿ ಹೂಗಿಡವೊಂದು 

ಕಟ್ಟಿಲ್ಲ ಹೂಮಾಲೆ 

ಕಣ್ಣಲ್ಲಿ ಕಣ್ಣಿಡು ನೀನು 

ಮತ್ತೇಲ್ಲಾ ಆಮೇಲೆ 

ಕಾಣಬಲ್ಲೆ ಕನಸಲ್ಲೂ 

ನಿನ್ನ ಹೆಜ್ಜೆ ಗುರುತು 

ಕೇಳಬೇಡ ಇನ್ನೇನು ನೀನು 

ನನ್ನ ಕುರಿತು 

ಎದೆಯಾಳದಿಂದ ಮಧು 

ಮೌನ ಒಂದು 

ಕರೆವಾಗ ಜಂಟಿಯಾಗಿ 

ಇಲ್ಲೊಂದು ಜೀವ 

ಅಲ್ಲೊಂದು ಜೀವ 

ಇರಬೇಕೆ ಒಂಟಿಯಾಗಿ 

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ 

ಚೂರಾದ ಚಂದ್ರನೀಗ 

ಇಲ್ಲೊಂದು ಚೂರು 

ಅಲ್ಲೊಂದು ಚೂರು 

ಒಂದಾಗಬೇಕು ಬೇಗ 

Post a Comment

0 Comments