ಪುರಿ ಜಗನ್ನಾಥ ರಥಯಾತ್ರೆ ವೇಳೆ ಭಾರಿ ಕಾಲ್ತುಳಿತ | 500ಕ್ಕೂ ಹೆಚ್ಚು ಭಕ್ತಾದಿಗಳಿಗೆ ಗಾಯ, 40 ಜನರಿಗೆ ಗಂಭೀರ | puri rath yatra

ಒಡಿಶಾದ ಪುರಿಯಲ್ಲಿ ವಾರ್ಷಿಕವಾಗಿ ನಡೆಯುವ ರಥೋತ್ಸವದ ಸಮಯದಲ್ಲಿ ಮೂರು ರಥಗಳನ್ನು ಎಳೆಯಲು ಭಾರಿ ಜನಸಾಗರವೇ ಸೇರುತ್ತದೆ. ರಥಗಳನ್ನು ಶಾಸ್ತ್ರೋಕ್ತವಾಗಿ ಎಳೆಯುವ ಸಂದರ್ಭದಲ್ಲಿ ಜನ ಸಾಗರ ಹೆಚ್ಚಾಗಿ ಸೇರಿದ್ದರಿಂದ, 500ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ ಹಾಗೂ ನಲವತ್ತಕ್ಕೂ ಹೆಚ್ಚು ಭಕ್ತರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


 ಜಗನ್ನಾಥ ರಥಯಾತ್ರೆಯ ಸಮಯದಲ್ಲಿ ಈ ರೀತಿಯ ಸನ್ನಿವೇಶ ಉಂಟಾದ ಬಗ್ಗೆ ಓಡಿಸಾದ ಸಚಿವ ಮುಖೇಶ್ ಅವರು ಈ ರೀತಿ ಹೇಳಿದ್ದಾರೆ - ತುಂಬಾ ಜನಸಂದಣಿ ಇರುವುದರಿಂದ ಒಬ್ಬರು ಅಥವಾ ಇಬ್ಬರು ಭಕ್ತರು ಕುಸಿದು ಬಿದ್ದರು. ರಕ್ಷಣಾ ತಂಡಗಳನ್ನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ದೇವಾಲಯದ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಗ್ಲುಕೋಸ್ ಮತ್ತು ನೀರನ್ನು ಸರಿಯಾಗಿ ನೀಡಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಇಲ್ಲಿದ್ದೇನೆ. ಅಗತ್ಯವಿರುವವರಿಗೆ ಸರಿಯಾದ ಆರೋಗ್ಯ ಸೇವೆ ನೀಡಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲು ನಾನು ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಮೊದಲ ದಿನದ ಆರಂಭದಲ್ಲಿ, 12 ನೇ ಶತಮಾನದ ದೇವಾಲಯದ ಬಳಿಯಿಂದ  ಶ್ರೀ ಗುಂಡಿಂಚ ದೇವಾಲಯದ ಕಡೆಗೆ ಹೋಗುವ ರಸ್ತೆಯಲ್ಲಿ ಸಾವಿರಾರು ಜನರು ಜಗನ್ನಾಥ ಮತ್ತು ಬಲಬದ್ರ ರಥವನ್ನು ಎಳೆದರು.

 ಒಡಿಸಾದ ರಾಜ್ಯಪಾಲ ಹರಿಬಾಬು ಕಂಬಾಂಪತಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಜಿ ಮತ್ತು ಇತರ ಅನೇಕ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

 ವಾರ್ಷಿಕ ರಥೋತ್ಸವಕ್ಕಾಗಿ ಸುಮಾರು ಒಂದು ಮಿಲಿಯನ್ ಭಕ್ತರು ಈ ಪಟ್ಟಣಕ್ಕೆ ಸೇರಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments